alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾದದಲ್ಲಿ ಚಂದ್ರಶೇಖರ ರಾವ್ ಇಫ್ತಾರ್ ಕೂಟ

ರಂಜಾನ್ ತಿಂಗಳಿನಲ್ಲಿ ಇಫ್ತಾರ್ ಕೂಟ ಆಯೋಜನೆ ಮಾಡೋದು ಒಂದು ಸಂಪ್ರದಾಯ. ರಾಜಕೀಯ ನಾಯಕರು ಮತ ಬ್ಯಾಂಕ್ ಗುರಿಯಾಗಿಸಿಕೊಂಡು ಈ ಇಫ್ತಾರ್ ಕೂಟ ಆಯೋಜನೆ ಮಾಡ್ತಾರೆ. ಸದ್ಯ ತೆಲಂಗಾಣದ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಇಫ್ತಾರ್ ಕೂಟ ವಿವಾದಕ್ಕೆ ಕಾರಣವಾಗಿದೆ. ಚಂದ್ರಶೇಖರ ರಾವ್ ಈ ವರ್ಷ ಇಫ್ತಾರ್ ಕೂಟಕ್ಕೆ 66 ಕೋಟಿ ರೂಪಾಯಿ ಖರ್ಚು ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಕೆಲ ಸಾಮಾಜಿಕ ಸಂಘಟನೆಗಳು ಕೆಸಿಆರ್ ಇಫ್ತಾರ್ ಕೂಟದ ಮೊತ್ತಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಕೆಸಿಆರ್ ದಾವತ್-ಇ-ಇಫ್ತಾರ್ ಕೂಟವನ್ನು ಹೈದ್ರಾಬಾದ್ ನಲ್ಲಿ ಆಯೋಜನೆ ಮಾಡಿದ್ದಾರೆ. ಕ್ಯಾಬಿನೆಟ್ ಸದಸ್ಯರ ಜೊತೆ ಪ್ರಸಿದ್ಧ ಗಣ್ಯರು ಈ ಕೂಟದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.

ಕೆಸಿಆರ್ ಇಫ್ತಾರ್ ಕೂಟದ ಜೊತೆ ಗ್ರೇಟರ್ ಹೈದ್ರಾಬಾದ್ ಮುನ್ಸಿಪಲ್ ಕೂಡ ಹೈದ್ರಾಬಾದ್ ನಲ್ಲಿ ಇಫ್ತಾರ್ ಕೂಟ ಆಯೋಜನೆ ಮಾಡಲಿದೆ. ಹೈದ್ರಾಬಾದ್ ಸುತ್ತಲಿನ 400 ಮಸೀದಿ ಹಾಗೂ ರಾಜ್ಯದ 400 ಮಸೀದಿಗಳಲ್ಲಿ ಪ್ರತ್ಯೇಕವಾಗಿ ಇಫ್ತಾರ್ ಕೂಟ ನಡೆಯಲಿದೆ. ರಂಜಾನ್ ಹಿನ್ನೆಲೆಯಲ್ಲಿ ಬಟ್ಟೆಯನ್ನು ಉಡುಗೊರೆ ರೂಪದಲ್ಲಿ ನೀಡಲಾಗುತ್ತದೆ. ಈ ಎಲ್ಲ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ 66 ಕೋಟಿ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದೆ.

ವಕೀಲ ಅಭಿನವ್ ಜೂನ್ 5ರಂದು ಹೈಕೋರ್ಟ್ ನಲ್ಲಿ ಸಾರ್ವಜನಿಕ ಅರ್ಜಿ ಸಲ್ಲಿಸಿದ್ದರು. ಇದ್ರ ವಿಚಾರಣೆ ಮಂಗಳವಾರ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...