alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಮೆರಾದಲ್ಲಿ ಸೆರೆಯಾಗಿದೆ ಭಯಾನಕ ದೃಶ್ಯ

pig-dd

ನೆಲ್ಲೂರು: ವೃದ್ಧೆಯ ಮೇಲೆ ಹಂದಿಗಳು ದಾಳಿ ಮಾಡಿದ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕವಾಲಿಯಲ್ಲಿ ನಡೆದಿದೆ.

ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನೊಬ್ಬನ ಮೇಲೆ ಹಂದಿಗಳು ದಾಳಿ ಮಾಡಿದ್ದು, ಆತನನ್ನು ಪಾರು ಮಾಡಿದ ವೃದ್ಧೆ ಹಂದಿಗಳನ್ನು ಓಡಿಸಿದ್ದಾರೆ.

ಆಗ ವೃದ್ಧೆಯ ಮೇಲೆ ಎಗರಿದ ಹಂದಿಗಳು ಕೆಳಗೆ ಬೀಳಿಸಿ, ಕಚ್ಚಿ ಎಳೆದಾಡಿವೆ. ಸ್ಥಳೀಯರು ರಕ್ಷಿಸಲು ಮುಂದಾದರೂ, ಜಗ್ಗದೇ ಮತ್ತೆ ಮತ್ತೆ ದಾಳಿ ಮಾಡಿವೆ.

ಕೊನೆಗೆ ವೃದ್ಧೆಯನ್ನು ಹಂದಿಗಳಿಂದ ಪಾರು ಮಾಡಲಾಗಿದೆ. ಗಂಭೀರವಾದ ಗಾಯಗಳಾಗಿರುವ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಕವಾಲಿಯ ಅಯ್ಯಪ್ಪಗೈಡ್ ಪ್ರದೇಶದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ಹಲವು ಬಾರಿ ಮಕ್ಕಳು, ಮಹಿಳೆಯರ ಮೇಲೆ ದಾಳಿ ಮಾಡಿವೆ. ಹಂದಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಸಂಸ್ಥೆಗೆ ಮನವಿ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ.

ವೃದ್ಧೆಯ ಮೇಲೆ ಹಂದಿ ದಾಳಿ ಮಾಡಿರುವ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...