alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಳಿ ಅವತಾರದಲ್ಲಿ ಸ್ಮೃತಿ ಇರಾನಿ ರುಂಡ ಹಿಡಿದ ಮಾಯಾವತಿ !

mayawati kali

ಹೈದರಾಬಾದ್ ಕೇಂದ್ರೀಯ ವಿವಿ ವಿದ್ಯಾರ್ಥಿ ರೋಹಿತ್ ವೇಮುಲ ಸಾವಿನ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಸಭೆ ಕಲಾಪದಲ್ಲಿ ಬಿ.ಎಸ್.ಪಿ ನಾಯಕಿ ಮಾಯಾವತಿ ಅವರ ಪ್ರಶ್ನೆಗೆ ಉತ್ತರಿಸುತ್ತಾ, ಸಚಿವೆ ಸ್ಮೃತಿ ಇರಾನಿ ತಮ್ಮ ತಲೆಯನ್ನೇ ಕತ್ತರಿಸಿ ನಿಮ್ಮ ಪಾದದ ಬಳಿ ಇಡುವುದಾಗಿ ಹೇಳಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಈ ವಿಷಯ ತಣ್ಣಗಾಗುತ್ತಿದೆ ಎನ್ನುತ್ತಿರುವಾಗಲೇ ಮತ್ತೊಮ್ಮೆ ಪ್ರತಿಧ್ವನಿಸಿದೆ. ಕಾಳಿ ಮಾತೆಯ ಅವತಾರದಲ್ಲಿ ಕಾಣಿಸಿಕೊಂಡಿರುವ ಮಾಯಾವತಿ ಕೈಯಲ್ಲಿ ಸ್ಮೃತಿ ಇರಾನಿ ಅವರ ರುಂಡವನ್ನು ಹಿಡಿದಿರುವಂತೆ ಚಿತ್ರಿಸಲಾಗಿದ್ದು, ಇದನ್ನು ಬಿ.ಎಸ್.ಪಿ. ಕಾರ್ಯಕರ್ತರೊಬ್ಬರು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಹೀಗೆ ಫೋಟೋ ಗ್ರಾಫಿಕ್ ಮಾಡಿದ ಬಿ.ಎಸ್.ಪಿ. ಕಾರ್ಯಕರ್ತ ಬಲ್ ಮುಕುಂದ್ ದುರಿಯಾ ಎಂಬಾತ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಅದು ವಿವಾದಕ್ಕೆ ಕಾರಣವಾಗಿದೆ.

ವಿರೋಧ ವ್ಯಕ್ತವಾದ ಬಳಿಕ ಆತ ಅದನ್ನು ಡಿಲಿಟ್ ಮಾಡಿದ್ದು, ಅದಾಗಲೇ ಅಪಾರ ಸಂಖ್ಯೆಯ ಜನರಿಗೆ ಶೇರ್ ಆಗಿದೆ. ಬಿಜೆಪಿ ನಾಯಕರು ಹೀಗೆ ಕಾಳಿ ಮಾತೆಯ ಅವತಾರದಲ್ಲಿ ಮಾಯಾವತಿ, ಅವರ ಕೈಯಲ್ಲಿ ಸ್ಮೃತಿ ಇರಾನಿ ರುಂಡ ಇರುವಂತೆ ಚಿತ್ರಿಸಿರುವುದನ್ನು ಖಂಡಿಸಿದ್ದಾರೆ. ಫೋಟೋ ವೈರಲ್ ಆಗಿದ್ದು, ಅಷ್ಟೇ ವಿವಾದ ಸೃಷ್ಠಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...