alex Certify
ಕನ್ನಡ ದುನಿಯಾ       Mobile App
       

Kannada Duniya

ಅಧಿಕೃತವಾಗಿ ಬಹಿರಂಗವಾಯ್ತು ಮೋದಿಯವರ ಫೋಟೋದ ಅಸಲಿಯತ್ತು

moda_1453374595

ಪ್ರಧಾನಿ ನರೇಂದ್ರ ಮೋದಿಯವರ ಫೋಟೋವೊಂದು ಈ ಹಿಂದೆ ಭಾರೀ ಪ್ರಚಾರ ಪಡೆದಿತ್ತು. ಅದರಲ್ಲೂ ಕಳೆದ ಲೋಕಸಭಾ ಚುನಾವಣೆಯಲ್ಲಿ ಹರಿದಾಡಿದ್ದ ಈ ಫೋಟೋದಲ್ಲಿ ನರೇಂದ್ರ ಮೋದಿಯವರು ಕಸ ಗುಡಿಸುತ್ತಿದ್ದರು.

ಅತ್ಯಂತ ಬಡತನದ ಹಿನ್ನಲೆ ಹೊಂದಿರುವ ನರೇಂದ್ರ ಮೋದಿಯವರು ಇಂದು ಪ್ರಧಾನಿ ಹುದ್ದೆ ಅಲಂಕರಿಸುವ ಮಟ್ಟಕ್ಕೇರಿದ್ದಾರೆ ಎಂದು ಅವರ ಅಭಿಮಾನಿಗಳು ಸಂಭ್ರಮಿಸಿದ್ದರೆ, ಆ ಸಂದರ್ಭದಲ್ಲಿಯೇ ಹಲವರು ಈ ಫೋಟೋದ ಅಸಲಿತ್ತಿನ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಇದು ಫೋಟೋ ಶಾಪ್ ಮಾಡಿದ ಚಿತ್ರ ಎಂಬ ಮಾತುಗಳು ಕೇಳಿ ಬಂದಿದ್ದವು. ಅದೀಗ ನಿಜವಾಗಿದೆ. ಈ ಫೋಟೋವನ್ನು ಎಡಿಟ್ ಮಾಡಲಾಗಿತ್ತು ಎಂಬ ಮಾಹಿತಿ ಅಧಿಕೃತವಾಗಿ ಹೊರ ಬಿದ್ದಿದೆ.

ಅಹ್ಮದಾಬಾದಿನ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಈ ಚಿತ್ರದ ನೈಜತೆ ಕುರಿತಂತೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದು, ಅದಕ್ಕೀಗ ಉತ್ತರ ನೀಡಲಾಗಿದೆ. ಫೋಟೋದಲ್ಲಿರುವವರು ನರೇಂದ್ರ ಮೋದಿಯವರಲ್ಲ. ಆ ಚಿತ್ರವನ್ನು ಎಡಿಟ್ ಮಾಡಲಾಗಿದೆ ಎಂದು ಅದರಲ್ಲಿ ತಿಳಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...