alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ರೇಕ್ ಫೇಲ್ ಬಸ್ ನಲ್ಲಿದ್ದವರಿಗೆ ದೇವರಾದ ಪ್ರಯಾಣಿಕ

accident_1470595895

ರಾಜಸ್ಥಾನದ ಉದಯ್ಪುರದಲ್ಲಿ ಕಂದಕ್ಕೆ ಉರುಳ್ತಿದ್ದ ಬಸ್ಸನ್ನು ಸಂಭಾಳಿಸಿದ ಪ್ರಯಾಣಿಕನೊಬ್ಬ 50 ಮಂದಿಯ ಪ್ರಾಣ ಉಳಿಸಿದ್ದಾನೆ. ರಾಣ್ಘಾಟಿಯಲ್ಲಿ ಪ್ರವಾಸಿ ಬಸ್ ನ ಬ್ರೇಕ್ ಫೇಲ್ ಆಗಿದೆ. ಇದನ್ನು ತಿಳಿದ ಚಾಲಕ ಪ್ರಾಣ ಉಳಿಸಿಕೊಳ್ಳಲು ಬಸ್ ನಿಂದ ಜಿಗಿದಿದ್ದಾನೆ. ಬಸ್ ನಲ್ಲಿದ್ದ ತುಳಸಿರಾಮ್ ಎಂಬಾತ 50 ಮಂದಿ ಪ್ರಯಾಣಿಕರಿಗೆ ಜೀವದಾನ ಮಾಡಿದ್ದಾನೆ.

ಚಾಲಕ ಬಸ್ ನಿಂದ ಜಿಗಿಯುತ್ತಿದ್ದಂತೆ ಪ್ರಯಾಣಿಕರಿಗೆ ಧೈರ್ಯ ಹೇಳಿದ ತುಳಸಿರಾಮ್, ಡ್ರೈವರ್ ಸೀಟಿನಲ್ಲಿ ಕುಳಿತುಕೊಂಡಿದ್ದಾನೆ. ನಂತ್ರ ಸ್ಟೇರಿಂಗನ್ನು 90 ಡಿಗ್ರಿ ತಿರುಗಿಸಿದ್ದಾನೆ. ಇಲ್ಲವಾದ್ರೆ ಬಸ್ ದೊಡ್ಡ ಕಂದಕಕ್ಕೆ ಉರುಳುತ್ತಿತ್ತು ಎನ್ನಲಾಗಿದೆ. ನಿಯಂತ್ರಣ ತಪ್ಪಿದ ಬಸ್ ಮೂರು ಬೈಕ್ ಸವಾರರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಓರ್ವ ಬೈಕ್ ಸವಾರ ಸಾವನ್ನಪ್ಪಿದ್ದಾನೆ.

ಬಸ್ ನಲ್ಲಿದ್ದ 40 ಮಂದಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ನಲ್ಲಿದ್ದವರೆಲ್ಲ ಉದಯ್ಪುರದಿಂದ ಪಿಕ್ ನಿಕ್ ಗಾಗಿ ಬಂದಿದ್ದರು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...