alex Certify ಮಾಲಿನ್ಯಮುಕ್ತ ನಗರ ಈ ಪ್ರವಾಸಿ ತಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಲಿನ್ಯಮುಕ್ತ ನಗರ ಈ ಪ್ರವಾಸಿ ತಾಣ

ದೇಶದಲ್ಲಿ ಪ್ರತಿದಿನ ಹೆಚ್ಚುತ್ತಿರುವ ಮಾಲಿನ್ಯ ಹಾಗೂ ವಿಷ ಗಾಳಿಗೆ ಜನರು ಆತಂಕಗೊಂಡಿದ್ದಾರೆ. ಕಲುಶಿತ ನಗರಗಳ ಪಟ್ಟಿ ಸಾಕಷ್ಟು ದೊಡ್ಡದಿದೆ. ಆದ್ರೆ ಮಾಲಿನ್ಯ ಮುಕ್ತ ನಗರಗಳ ಸಂಖ್ಯೆ ಬಹಳ ಕಡಿಮೆ. ಕುಟುಂಬಸ್ಥರ ಜೊತೆ ಮಾಲಿನ್ಯ ಮುಕ್ತ ನಗರದಲ್ಲಿ ಸುತ್ತಾಡಲು ಬಯಸಿದ್ದರೆ ಭಾರತದ ಈ ನಗರ ನಿಮಗೆ ಬೆಸ್ಟ್.

ಕೇರಳದ ಪಥನಂತಿಟ್ಟ ಮಾಲಿನ್ಯ ಮುಕ್ತ ನಗರಗಳಲ್ಲಿ ಒಂದು. ದೊಡ್ಡ ಕಾಡು, ಸ್ವಚ್ಛ ವಾತಾವರಣದ ಜೊತೆ ಶುದ್ಧ ನೀರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿ ಪ್ರಕೃತಿಯ ಅದ್ಭುತ ಸೌಂದರ್ಯವನ್ನು ಸವಿಯಬಹುದು.

ಮಹಾರಾಷ್ಟ್ರದ ಮಾಥೇರಾನ್ ಕೂಡ ಮಾಲಿನ್ಯ ಮುಕ್ತ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಸುಂದರ ಗಿರಿಧಾಮಗಳನ್ನು ಹೊಂದಿರುವ ಪ್ರದೇಶದ ಸೌಂದರ್ಯ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಮಾಲಿನ್ಯ ಮಟ್ಟ ಕಡಿಮೆ ಇರುವ ಜೊತೆಗೆ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ಕೊಲ್ಲಂ, ಕೇರಳದ ವಾಣಿಜ್ಯ ನಗರ ಮಾತ್ರವಲ್ಲ. ಇದು ಅತ್ಯುತ್ತಮ, ಸುಂದರ ಮತ್ತು ಮಾಲಿನ್ಯ ಮುಕ್ತ ನಗರಗಳಲ್ಲಿ ಒಂದಾಗಿದೆ. ಸುಂದರ ತಾಣದಲ್ಲಿ ಪ್ರವಾಸಿಗರಿಗೆ ಸಾಕಷ್ಟು ಮನರಂಜನೆ ಲಭ್ಯವಾಗಲಿದೆ.

ಹಿಮಾಚಲ ಪ್ರದೇಶದ ಕಿನ್ನೌರ್, ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ. ಇಲ್ಲಿನ ನೈಸರ್ಗಿಕ ಸೌಂದರ್ಯ ಪ್ರವಾಸಿಗರಿಗೆ ಅಧ್ಬುತ ಅನುಭವ ನೀಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...