alex Certify
ಕನ್ನಡ ದುನಿಯಾ       Mobile App
       

Kannada Duniya

ಅಮೆಜಾನ್‌ ನಲ್ಲಿ ವಾಜಪೇಯಿ ಚಿತಾಭಸ್ಮ ಮಾರಾಟ…!

ಮಾಜಿ ಪ್ರಧಾನಿ ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮ ಅಮೆಜಾನ್‌ ನಲ್ಲಿ ಲಭ್ಯವಿದೆ…!  ಹೀಗೆಂದು ಅನಾಮಿಕ ಟ್ವಿಟರ್‌ ಬಳಕೆದಾರನೊಬ್ಬ ಚಿತ್ರ ಸಹಿತ ಪೋಸ್ಟ್‌ ಮಾಡಿದ್ದಾನೆ. ಈ ವಿಷಯ ಸಾಮಾಜಿಕ ತಾಣದಲ್ಲಿ ವೈರಲ್‌ ಆಗಿದ್ದು, ಅನೇಕರು ಇದರ ಹಿಂದಿನ ಸತ್ಯಾಸತ್ಯತೆ ಪರಿಶೀಲಿಸುವ ಗೋಜಿಗೆ ಹೋಗದೆ ಅಮೆಜಾನ್‌ಗೆ ಛೀಮಾರಿ ಹಾಕಿದ್ದಾರೆ.

ಅನಾಮಿಕ ಟ್ವಿಟರ್‌ ಬಳಕೆದಾರ, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮ ಹಾಗೂ ನರೇಂದ್ರ ಮೋದಿಯವರ ಕುರಿತಾದ ಪುಸ್ತಕ ಅಮೆಜಾನ್‌ನಲ್ಲಿ ಮಾರಾಟಕ್ಕಿರುವುದಾಗಿ ಪೋಸ್ಟ್‌ ಮಾಡಿದ್ದಾನೆ. ಅಲ್ಲದೆ ಈ ಉತ್ಪನ್ನ ಚೆನ್ನಾಗಿದೆ, ಆದರೆ ಚಿತಾಭಸ್ಮ ಮಾತ್ರ ಸ್ವಲ್ಪವೇ ಇದೆ ಎಂದು ಯೂಸರ್‌ ರಿವ್ಯೂ ಸಹ ಬರೆದಿದ್ದಾನೆ.

ಅನೇಕರು ಅಮೆಜಾನ್‌ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲ ಹೊತ್ತಿನ ಬಳಿಕ ಪೋಸ್ಟ್‌ ಮಾಡಿದ್ದ ಯೊಯೊ ಮೋದಿ ಎಂಬ ಖಾತೆ ಹೊಂದಿರುವ ಅನಾಮಿಕ, ಇದು ಸುಳ್ಳು ಸುದ್ದಿ ಎಂದು ಘೋಷಿಸಿದ್ದಾನೆ. ಆದರೆ ತಾನು ಹಬ್ಬಿಸಿದ್ದ ಸುಳ್ಳು ಸುದ್ದಿ ಕುರಿತು ಕ್ಷಮೆ ಯಾಚಿಸಿಲ್ಲ.

ಆ.16ರಂದು ಅಟಲ್‌ ಬಿಹಾರಿ ವಾಜಪೇಯಿ ಏಮ್ಸ್‌ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ಆ ಸಂದರ್ಭದಲ್ಲೂ ಹಲವು ಫೇಕ್‌ ಫೋಟೋಗಳು ಸಾಮಾಜಿಕ ತಾಣದಲ್ಲಿ ಹರಿದಾಡಿದ್ದವು. ಭಾರತದಲ್ಲಿ ಸುಳ್ಳು ಸುದ್ದಿಗಳು ಅತಿ ವೇಗವಾಗಿ ಜನರನ್ನು ತಲುಪುತ್ತಿದ್ದು, ಸರಕಾರ, ಕಾನೂನು ವ್ಯವಸ್ಥೆಗೆ ತಲೆನೋವಾಗಿ ಪರಿಣಮಿಸಿದೆ.

ತಂತ್ರಜ್ಞಾನ ಹಾಗೂ ಇನ್ನಷ್ಟು ನಿಯಮಗಳನ್ನು ರೂಪಿಸಿ, ಸುಳ್ಳು ಸುದ್ದಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಂದ ಸುದ್ದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಇದಕ್ಕೊಂದು ಪರಿಹಾರವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...