alex Certify
ಕನ್ನಡ ದುನಿಯಾ       Mobile App
       

Kannada Duniya

ಜಯಲಲಿತಾರ ರಾಜಕೀಯ ಬದುಕನ್ನೇ ಬದಲಾಯಿಸಿದ ಆ ಫೋಟೋ..!

Political leader Jayalalitha after being assaulted in Tamil Nadu Assembly. Express archive photo on 1989

ಪತ್ರಿಕೆಯೊಂದರ ಛಾಯಾಗ್ರಾಹಕ ಶಿವರಾಮನ್ ಕ್ಲಿಕ್ಕಿಸಿದ್ದ ಒಂದೇ ಒಂದು ಫೋಟೋ ಜಯಲಲಿತಾರ ರಾಜಕೀಯ ದಿಕ್ಕನ್ನೇ ಬದಲಾಯಿಸಿತ್ತು. ತಮಿಳುನಾಡಿನ ರಾಜಕೀಯ ದೆಸೆಯೇ ಬದಲಾಯ್ತು. ‘ಅಮ್ಮಾ’ ಆಗಿ ಗುರುತಿಸಿಕೊಂಡ ಜಯಲಲಿತಾ, ಜನಮೆಚ್ಚಿದ ರಾಜಕಾರಣಿಯಾಗಿ ಬದಲಾದ್ರು.

1989ರಲ್ಲಿ ವಿರೋಧ ಪಕ್ಷದ ನಾಯಕಿಯಾಗಿದ್ದ ಜಯಲಲಿತಾರ ಮೇಲೆ ವಿಧಾನಸಭೆಯಲ್ಲಿ ಹಲ್ಲೆ ನಡೆದಿದೆ ಎಂಬ ಆರೋಪವಿದೆ. ಈ ಘಟನೆಗೆ ಒಬ್ಬೊಬ್ಬರು ಒಂದೊಂದು ರೀತಿಯ ಬಣ್ಣ ಕಟ್ಟಿದ್ದಾರೆ. ಆಗ ಸಿಎಂ ಆಗಿದ್ದ ಕರುಣಾನಿಧಿ ಬಜೆಟ್ ಮಂಡಿಸುತ್ತಿದ್ದರು, ಪದೇ ಪದೇ ಆಕ್ಷೇಪವೆತ್ತುತ್ತಿದ್ದ ಜಯಾ ಭಾಷಣಕ್ಕೆ ಅಡ್ಡಿಪಡಿಸಿದ್ರು. ಬಳಿಕ ಕರುಣಾನಿಧಿ ಕೂಡ ತಿರುಗೇಟು ನೀಡಿದ್ರು. ಇದರಿಂದ ವಿಧಾನಸಭೆಯಲ್ಲಿ ಗದ್ದಲ, ಕೋಲಾಹಲ ಮುಗಿಲು ಮುಟ್ಟಿತ್ತು.

ಜಯಲಲಿತಾ ವಿಧಾಸಭೆಯಿಂದ ಹೊರಹೋಗಲು ಮುಂದಾದಾಗ ಮಾನವ ಸರಪಳಿ ನಿರ್ಮಿಸಿ ಅವರನ್ನು ಡಿಎಂಕೆ ಸದಸ್ಯರು ಅಡ್ಡಗಟ್ಟಿದ್ರು. ಡಿಎಂಕೆ ಸಚಿವ ದುರೈ ಮುರುಗನ್ ಜಯಾರ ಸೀರೆ ಎಳೆದಿದ್ದರಂತೆ. ಹರಿದ ಉಡುಪಿನಲ್ಲೇ ಹೊರಹೋಗುವಂತೆ ಒತ್ತಾಯಿಸಿದ್ದರಂತೆ. ಈ ಘಟನೆ ನಡೆದಾಗ ವಿಧಾನಸಭೆಯ ಬಳಿಯಿದ್ದ ಛಾಯಾಗ್ರಾಹಕ ಶಿವರಾಮನ್, ಜಯಾರ ಫೋಟೋ ತೆಗೆದಿದ್ರು. ಆ ಒಂದು ಫೋಟೋ ಅಮ್ಮನಿಗೆ ಸಾರ್ವಜನಿಕ ಸಹಾನುಭೂತಿ ಗಳಿಸಿಕೊಟ್ಟಿತ್ತು, ಮತ್ತೆ ಸಿಎಂ ಆದ ಜಯಲಲಿತಾ ವಿಧಾನಸಭೆ ಪ್ರವೇಶಿಸಿದ್ರು. ಅದಾದ ಬಳಿಕ ರಾಜಕಾರಣದಲ್ಲಿ ಪುರುಷರ ಅಧಿಪತ್ಯಕ್ಕೆ ಜಯಲಲಿತಾ ಸವಾಲೊಡ್ಡುತ್ತಲೇ ಬಂದಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...