alex Certify
ಕನ್ನಡ ದುನಿಯಾ       Mobile App
       

Kannada Duniya

ಮನ ಕಲಕುತ್ತೆ ಜಾಲತಾಣಗಳಲ್ಲಿ ಹರಿದಾಡ್ತಿರೋ ಈ ಫೋಟೋ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋವೊಂದು ಎಲ್ಲರ ಮನ ಕಲಕಿದೆ. ಫೋಟೋದಲ್ಲಿರುವ ವ್ಯಕ್ತಿ ಮಾಡಿರುವ ಮಾನವೀಯ ಕಾರ್ಯಕ್ಕೆ ಈಗ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

ತೆಲಂಗಾಣ ಡಿಜಿಪಿ ಕಛೇರಿಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹರ್ಷಾ ಭಾರ್ಗವಿ ಎಂಬವರು ಈ ಫೋಟೋವನ್ನು ಶೇರ್ ಮಾಡಿದ್ದು, ಇದಕ್ಕೆ ಮೆಚ್ಚುಗೆ ಸೂಚಿಸಿ ಸಹಸ್ರಾರು ಮಂದಿ ಲೈಕ್ ಮಾಡಿದ್ದಾರೆ.

ಘಟನೆ ಶುಕ್ರವಾರದಂದು ನಡೆದಿದ್ದು, ಸಚಿವ ನರಸಿಂಹರೆಡ್ಡಿಯವರ ಕಾರ್ಯಕ್ರಮವೊಂದರ ನಿಮಿತ್ತ ಕುಕ್ಕಟಪಲ್ಲಿ ಪೊಲೀಸ್ ಠಾಣೆಯ ಟ್ರಾಫಿಕ್ ಹೋಂ ಗಾರ್ಡ್ ಬಿ. ಗೋಪಾಲ್ ಜವಾಹರಲಾಲ್ ನೆಹರು ತಾಂತ್ರಿಕ ಮಹಾವಿದ್ಯಾಲಯದ ಬಳಿ ಕರ್ತವ್ಯದಲ್ಲಿದ್ದರು. ಈ ವೇಳೆ ಅಸಹಾಯಕ ವೃದ್ದೆಯೊಬ್ಬಳು ಮರದಡಿ ಕುಳಿತಿರುವುದು ಗೋಪಾಲ್ ರ ಕಣ್ಣಿಗೆ ಬಿದ್ದಿದೆ.

ವೃದ್ದೆಯನ್ನು ಕಂಡ ಗೋಪಾಲ್ ಆಕೆಗೆ ಟೀ ಹಾಗೂ ತಿಂಡಿ ಕೊಡಿಸಿದ್ದು, ಆದರೆ ತಿನ್ನಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದ ಆಕೆಗೆ ಗೋಪಾಲ್ ಸ್ವತಃ ಕೈ ತುತ್ತು ತಿನ್ನಿಸಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಆಗುತ್ತಿದ್ದಂತೆಯೇ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಅಲ್ಲದೇ ಅಸಹಾಯಕ ವೃದ್ದೆಗೆ ಈಗ ಆಶ್ರಯಕ್ಕೆ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...