alex Certify
ಕನ್ನಡ ದುನಿಯಾ       Mobile App
       

Kannada Duniya

ದುರ್ಗಾ ಭಕ್ತರನ್ನು ಸ್ವಾಗತಿಸಲಿದೆ 1 ಕೋಟಿಯ ರೋಬೋಟ್

ನೋಯ್ಡಾದ ದುರ್ಗಾ ಪೆಂಡಾಲ್ ನಲ್ಲಿ ರೋಬೋಟ್ ಎಲ್ಲರ ಗಮನ ಸೆಳೆಯುತ್ತಿದೆ. ಹೈದ್ರಾಬಾದ್ ನಿಂದ ಬಂದಿರುವ 1 ಕೋಟಿ ಮೌಲ್ಯದ ರೋಬೋಟ್, ದುರ್ಗೆ ದರ್ಶನಕ್ಕೆ ಬರುವ ಜನರನ್ನು ಸ್ವಾಗತಿಸಲಿದೆ. ವಿಶೇಷ ಅತಿಥಿಗಳು ಈ ರೋಬೋಟ್ ಕೈ ಮುಟ್ಟಬಹುದಾಗಿದೆ.

ಮಿತ್ರಾ ಹೆಸರಿನ ಈ ರೋಬೋಟನ್ನು ಹೈದ್ರಾಬಾದ್ ನ ಇನ್ವೆಂಟರಿ ರೊಬೊಟಿಕ್ಸ್ ನಿಂದ ತರಲಾಗಿದೆಯಂತೆ. 5 ಅಡಿ ಎತ್ತರದ  ಈ ರೋಬೋಟ್ ಬಂಗಾಳಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಜನರನ್ನು ಸ್ವಾಗತಿಸಲಿದೆ. ನೋಯ್ಡಾದಲ್ಲಿ ದುರ್ಗಾ ಪೂಜೆಗೆ ರೋಬೋಟ್ ಹೆಚ್ಚಿನ ಮೆರಗು ನೀಡಿದೆ.

ನೋಯ್ಡಾದ ಸೆಕ್ಟರ್ 34 ನಲ್ಲಿರುವ ದುರ್ಗಾ ಪೆಂಡಾಲ್ 25 ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಇದಕ್ಕಾಗಿ ಪೆಂಡಾಲಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಸೆಣಬಿನಿಂದ ಪೆಂಡಾಲ್ ನಿರ್ಮಾಣ ಮಾಡಲಾಗಿದೆ. ಪೆಂಡಾಲ್ ನಿರ್ಮಾಣಕ್ಕೆ ಬಂಗಾಳಿ ಕಲಾಕಾರರು 6 ತಿಂಗಳು ತೆಗೆದುಕೊಂಡಿದ್ದಾರೆ. 18 ಲಕ್ಷ ರೂಪಾಯಿ ಖರ್ಚು ಮಾಡಿ ಈ ಪೆಂಡಾಲ್ ನಿರ್ಮಾಣ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...