alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ವಾಹನ ಸವಾರರಿಗೊಂದು ಮಾಹಿತಿ

ptro-nov

ಬೆಂಗಳೂರು: ಕಮೀಷನ್ ಹೆಚ್ಚಳ ಸೇರಿದಂತೆ, ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಪೆಟ್ರೋಲಿಯಂ ವಿತರಕರ ಸಂಘದಿಂದ ಮುಷ್ಕರ ಕೈಗೊಳ್ಳಲಾಗಿದೆ.

ನವೆಂಬರ್ 3 ಮತ್ತು 4 ರಂದು ಪೆಟ್ರೋಲಿಯಂ ವಿತರಕರು ತೈಲ ಕಂಪನಿಗಳಿಂದ ಖರೀದಿ ನಿಲ್ಲಿಸಿ ಮುಷ್ಕರ ನಡೆಸಿದ್ದಾರೆ. ಪೆಟ್ರೋಲ್ ಬಂಕ್ ಗಳು ಎಂದಿನಂತೆ ಕಾರ್ಯ ನಿರ್ವಹಿಸಿದರೂ, ಖರೀದಿ ನಿಲ್ಲಿಸಿರುವುದರಿಂದ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಕೆಲವು ಕಡೆಗಳಲ್ಲಿ 2 ದಿನ್ ಪೆಟ್ರೋಲ್ ಸಿಗಲ್ಲ ಎಂಬ ಸುದ್ದಿ ಹರಡಿ ಅನೇಕ ಗ್ರಾಹಕರು ತಮ್ಮ ವಾಹನಗಳಿಗೆ ಫುಲ್ ಟ್ಯಾಂಕ್ ಮಾಡಿಸಿಕೊಂಡಿದ್ದಾರೆ.

ಹೀಗೆ ಹೆಚ್ಚಿನ ಗ್ರಾಹಕರು ತಮ್ಮ ವಾಹನಗಳ ಟ್ಯಾಂಕ್ ಫುಲ್ ಮಾಡಿಸಿಕೊಂಡ ಪರಿಣಾಮ, ಅನೇಕ ಕಡೆ ಪೆಟ್ರೋಲ್ ಬಂಕ್ ಗಳಲ್ಲಿ ಶೇ. 70 ರಷ್ಟು ಇಂಧನ ಖಾಲಿಯಾಗಿದೆ. ನವೆಂಬರ್ 4 ರಂದು ಇದು ಕೂಡ ಖಾಲಿಯಾದಲ್ಲಿ ಗ್ರಾಹಕರಿಗೆ ಮರು ದಿನದವರೆಗೆ ತೊಂದರೆಯಾಗಬಹುದೆಂದು ಹೇಳಲಾಗಿದೆ.

ಬಂಕ್ ಗಳು ಕಾರ್ಯ ನಿರ್ವಹಿಸಿದರೂ, ತೈಲ ಕಂಪನಿಗಳಿಂದ ಖರೀದಿ ನಿಲ್ಲಿಸಿರುವುದರಿಂದ ಬಂಕ್ ಗಳಿಗೆ ಪೆಟ್ರೋಲ್, ಡೀಸೆಲ್ ಪೂರೈಕೆ ಇರುವುದಿಲ್ಲ. ಇದರಿಂದಾಗಿ ಪೆಟ್ರೋಲ್, ಡೀಸೆಲ್ ದೊರೆಯುವುದು ದುರ್ಲಭವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...