alex Certify
ಕನ್ನಡ ದುನಿಯಾ       Mobile App
       

Kannada Duniya

ಮೇ.14ರಿಂದ 8 ರಾಜ್ಯಗಳಲ್ಲಿ ಭಾನುವಾರ ಸಿಗಲ್ಲ ಪೆಟ್ರೋಲ್

download

ದೇಶದ 8 ರಾಜ್ಯಗಳಲ್ಲಿ ಭಾನುವಾರ ಪೆಟ್ರೋಲ್ ಬಂಕ್ ಗಳು ಬಾಗಿಲು ಮುಚ್ಚಲಿವೆ. ಭಾರತೀಯ ಪೆಟ್ರೋಲ್ ಮಾಲೀಕರ ಸಂಘಟನೆ ಈ ನಿರ್ಧಾರ ತೆಗೆದುಕೊಂಡಿದೆ. ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂಧನಗಳನ್ನು ಉಳಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಪೆಟ್ರೋಲ್ ಮಾಲೀಕರ ಸಂಘ ಸ್ಪಂದಿಸಿದೆ.

ಮೇ 14ರ ನಂತ್ರ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಪ್ರತಿ ಭಾನುವಾರ ಪೆಟ್ರೋಲ್ ಬಂಕ್ ಬಾಗಿಲು ಮುಚ್ಚಲಿದೆ. ಭಾನುವಾರ ಪೆಟ್ರೋಲ್ ಬಂಕ್ ಬಂದ್ ಆಗುವುದರಿಂದ ಶೇಕಡಾ 20ರಷ್ಟು ಇಂಧನವನ್ನು ಉಳಿಸಬಹುದಾಗಿದೆ. ಭಾನುವಾರ ಬಾಗಿಲು ಮುಚ್ಚುವ ಅಧಿಕಾರ ನಮಗಿದೆ. ಭಾನುವಾರ ಬಂಕ್ ನಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಸಂಬಳ ನೀಡಬೇಕಾಗುತ್ತದೆ ಎಂದು ತಮಿಳುನಾಡಿನ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಪಿ. ಮುರುಳಿ ಹೇಳಿದ್ದಾರೆ.

ಎಲ್ಲ ಪೆಟ್ರೋಲ್, ಡೀಸೆಲ್ ಬಂಕ್ ಗಳಲ್ಲಿ ಒಬ್ಬ ಸಿಬ್ಬಂದಿ ಭಾನುವಾರ ಕೆಲಸ ಮಾಡಲಿದ್ದಾನೆ. ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಆತ ಪೆಟ್ರೋಲ್ ನೀಡಲಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...