alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತಿ ಭಾನುವಾರ ಪೆಟ್ರೋಲ್ ಬಂಕ್ ಗಳು ಬಂದ್ ?

petrol-pump

ಕಮಿಷನ್ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪಟ್ಟು ಹಿಡಿದಿರುವ ಪೆಟ್ರೋಲ್ ಬಂಕ್ ಮಾಲೀಕರು ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಬೇಡಿಕೆ ಈಡೇರದೇ ಇದ್ದಲ್ಲಿ ಮೇ 10ರಿಂದ ಪ್ರತಿ ಭಾನುವಾರವೂ ಪೆಟ್ರೋಲ್ ಬಂಕ್ ಗಳನ್ನೆಲ್ಲ ಬಂದ್ ಮಾಡುವುದಾಗಿ ಹೇಳಿದ್ದಾರೆ.

ಬಂಕ್ ಮಾಲೀಕರು ಪಟ್ಟು ಸಡಿಲಿಸದೆ ಇದ್ದಲ್ಲಿ ಪ್ರತಿ ಭಾನುವಾರ ವಾಹನ ಸವಾರರು ಪೆಟ್ರೋಲ್ ಸಿಗದೆ ಪರದಾಡಬೇಕಾಗುತ್ತದೆ. ಅಷ್ಟೇ ಅಲ್ಲ ಮೇ 10ರ ನಂತರ ಪ್ರತಿದಿನ ಕೇವಲ 8 ತಾಸು ಮಾತ್ರ ಕಾರ್ಯನಿರ್ವಹಿಸುವುದಾಗಿ ಬಂಕ್ ಮಾಲೀಕರು ತಿಳಿಸಿದ್ದಾರೆ.

ತೈಲ ಕಂಪನಿಗಳು ಕಮಿಷನ್ ಹೆಚ್ಚಳದ ಭರವಸೆ ನೀಡಿದ್ದರಿಂದ ಜನವರಿಯಲ್ಲಿ ಮುಷ್ಕರ ಹಿಂಪಡೆಯಲಾಗಿತ್ತು. ಆದ್ರೆ ನಾಲ್ಕು ತಿಂಗಳುಗಳು ಕಳೆದರೂ ಬೇಡಿಕೆ ಈಡೇರಿಲ್ಲ. ದಿನೇ ದಿನೇ ಹೆಚ್ಚುತ್ತಿರುವ ಖರ್ಚನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಈ ಕ್ರಮ ಅನಿವಾರ್ಯ ಅಂತಾ ಪೆಟ್ರೋಲ್ ಡೀಲರ್ ಗಳ ಸಂಘ ಹೇಳಿದೆ. ಮೇ 10ನ್ನು ಖರೀದಿ ರಹಿತ ದಿನವನ್ನಾಗಿ ಆಚರಿಸಲು ಮುಂದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...