alex Certify
ಕನ್ನಡ ದುನಿಯಾ       Mobile App
       

Kannada Duniya

300 ರೂ.ಗೆ ಮಾರಾಟವಾಗ್ತಿದೆ ಪೆಟ್ರೋಲ್..!

petrol-1479029242ಭಾರತದ ಪೂರ್ವೋತ್ತರ ರಾಜ್ಯ ಮಣಿಪುರ ಜನರ ಬದುಕು ದುಸ್ಥರವಾಗಿದೆ. 500 ರೂಪಾಯಿ ಹಾಗೂ ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳ ರದ್ದು ಹಾಗೂ ಯುನೈಟೆಡ್ ನಾಗಾ ಕೌನ್ಸಿಲ್ ಹೇರಿರುವ ಆರ್ಥಿಕ ದಿಗ್ಬಂಧನ ಮಣಿಪುರದ ಪರಿಸ್ಥಿತಿಯನ್ನು ಬದಲಾಯಿಸಿದೆ.

 ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಒಂದು ಲೀಟರ್ ಪೆಟ್ರೋಲ್ 300 ರೂಪಾಯಿಗೆ ಮಾರಾಟವಾಗ್ತಿದೆ. ಅಡುಗೆ ಸಿಲಿಂಡರ್ ಬೆಲೆ ಕೂಡ ಶ್ರೀಸಾಮಾನ್ಯರ ಕೈಗೆ ಸಿಗ್ತಾ ಇಲ್ಲ. ಒಂದು ಅಡುಗೆ ಸಿಲಿಂಡರ್ ಗೆ 2 ಸಾವಿರ ರೂಪಾಯಿ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಲ್ಲದೆ ಉಳಿದ ದಿನಬಳಕೆ ವಸ್ತುಗಳ ಬೆಲೆ ಕೂಡ ಏರ್ತಾ ಇದೆ.

 ಪೆಟ್ರೋಲ್ ಹಾಗೂ ಡೀಸೆಲ್ ಕಾಳ ಸಂತೆಯಲ್ಲಿ ಮಾರಾಟವಾಗ್ತಾ ಇದೆ ಎಂದು ಮೂಲಗಳು ತಿಳಿಸಿವೆ. ರಾಜ್ಯಕ್ಕೆ ಪೆಟ್ರೋಲ್ ಸರಬರಾಜಾಗ್ತಿಲ್ಲ. 1800 ಟ್ರಕ್ ಗಳು ಗಡಿಯಲ್ಲಿಯೇ ನಿಂತಿವೆ. ಯುನೈಟೆಡ್ ನಾಗಾ ಕೌನ್ಸಿಲ್ ನ ಅನಿರ್ಧಿಷ್ಟಾವಧಿ ಬಂದ್ ನಿಂದಾಗಿ ಪೆಟ್ರೋಲ್ ಸಿಗದೆ ಶಾಲಾ ವಾಹನಗಳು ಸಂಚರಿಸುತ್ತಿಲ್ಲ. ಪೆಟ್ರೋಲ್ ಬಂಕ್ ಗಳು ಖಾಲಿ ಹೊಡೆಯುತ್ತಿದ್ದು,ಶಾಲೆಗಳಿಗೂ ರಜೆ ಘೋಷಣೆ ಮಾಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...