alex Certify
ಕನ್ನಡ ದುನಿಯಾ       Mobile App
       

Kannada Duniya

ವರನಿಗೆ ಇಂಥ ಉಡುಗೊರೆ ನೀಡಿದ್ರು ಸ್ನೇಹಿತರು….

ಪೆಟ್ರೋಲ್-ಡಿಸೇಲ್ ಬೆಲೆ ಗಗನಕ್ಕೇರಿದೆ. ವಾಹನ ಸವಾರರು ಸೇರಿದಂತೆ ಜನ ಸಾಮಾನ್ಯರ ಬದುಕು ದುಸ್ತರವಾಗ್ತಿದೆ. ಈ ಮಧ್ಯೆ ತಮಿಳುನಾಡಿನಲ್ಲಿ ನಡೆದ ಮದುವೆಯೊಂದು ಎಲ್ಲರ ಗಮನ ಸೆಳೆದಿದೆ.

ಮದುವೆಯಲ್ಲಿ ವಧು-ವರರಿಗೆ ಉಡುಗೊರೆ ನೀಡುವುದು ಸಂಪ್ರದಾಯ. ತಮಿಳುನಾಡಿನ ಕುಡಲೂರಿನಲ್ಲಿ ಮದುವೆ ಸಮಾರಂಭದಲ್ಲಿ ವರನ ಸ್ನೇಹಿತರು ನೀಡಿದ ಉಡುಗೊರೆ ಆಶ್ಚರ್ಯ ಹಾಗೂ ನಗುವಿಗೆ ಕಾರಣವಾಗಿದೆ. ವರನ ಸ್ನೇಹಿತರು 5 ಲೀಟರ್ ಪೆಟ್ರೋಲನ್ನು ವರನಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಸ್ನೇಹಿತರು ಪೆಟ್ರೋಲ್ ನೀಡ್ತಿದ್ದಂತೆ ವರ-ವಧು ಆಶ್ಚರ್ಯಗೊಂಡ್ರೆ ನೆರೆದಿದ್ದವರೆಲ್ಲ ನಕ್ಕು ಖುಷಿ ವ್ಯಕ್ತಪಡಿಸಿದ್ದಾರೆ. 39 ಸೆಕೆಂಡಿನ ವಿಡಿಯೋವನ್ನು ಟಿವಿ ಚಾನೆಲ್ ಒಂದರಲ್ಲಿ ಪ್ರಸಾರ ಮಾಡಲಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ.

ಪೆಟ್ರೋಲ್ ಬೆಲೆ ಏರ್ತಿರುವ ಈ ಸಂದರ್ಭದಲ್ಲಿ ಸ್ನೇಹಿತರು ನೀಡಿದ ಉಡುಗೊರೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಮದುವೆಯಲ್ಲಿ ವಿಭಿನ್ನ ಉಡುಗೊರೆ ನೀಡೋದು ಹೊಸ ಸಂಗತಿಯಲ್ಲ. ತೊಗರಿ ಬೇಳೆ ಬೆಲೆ ಹೆಚ್ಚಾದಾಗ ಉಡುಗೊರೆ ರೂಪದಲ್ಲಿ ಅದನ್ನು ನೀಡಿದ ಉದಾಹರಣೆಗಳಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...