alex Certify
ಕನ್ನಡ ದುನಿಯಾ       Mobile App
       

Kannada Duniya

ಎರಡು ದಿನಗಳ ನಂತ್ರ ಮತ್ತೆ ಇಳಿಕೆಯಾಯ್ತು ಪೆಟ್ರೋಲ್ ಬೆಲೆ

ಎರಡು ದಿನಗಳ ನಂತ್ರ ಮತ್ತೆ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ತೈಲ ಕಂಪನಿ (ಹೆಚ್ ಪಿಸಿಎಲ್, ಬಿಪಿಎಸ್ಎಲ್, ಐಒಸಿ) ಕಳೆದ ಎರಡು ದಿನಗಳಿಂದ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಶುಕ್ರವಾರ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.

ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 8 ಪೈಸೆ ಇಳಿಕೆ ಮಾಡಿವೆ. ಮೇ 29 ರ ನಂತ್ರ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 2.08 ರೂಪಾಯಿ ಇಳಿಕೆಯಾದಂತಾಗಿದೆ. ತೈಲ ಕಂಪನಿಗಳು ಡಿಸೇಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ದೆಹಲಿಯಲ್ಲಿ ಈಗ ಲೀಟರ್ ಪೆಟ್ರೋಲ್ ಬೆಲೆ 76.35 ರೂಪಾಯಿಯಾಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 79.02 ರೂಪಾಯಿಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆಲ ಕಚ್ಚಾ ತೈಲಗಳ ಬೆಲೆಯಲ್ಲಿ ಸ್ವಲ್ಪ ಪ್ರಮಾಣದ ಏರಿಕೆಯಾಗಿದೆ. ಅಮೆರಿಕಾ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆಯಾಗಿದ್ದು, 67 ಡಾಲರ್ ಗೆ ಬಂದು ನಿಂತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...