alex Certify
ಕನ್ನಡ ದುನಿಯಾ       Mobile App
       

Kannada Duniya

ಲೀಟರ್ ಪೆಟ್ರೋಲ್ ಬೆಲೆ 300 ರೂ…!

petrole c

ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ 15 ದಿನಗಳಿಂದ ಮಳೆಯಾಗುತ್ತಿದ್ದು, ಹೆದ್ದಾರಿಗಳು ಬಂದ್ ಆಗಿ, ಅಗತ್ಯ ವಸ್ತುಗಳ ಪೂರೈಕೆಗೆ ತೊಂದರೆಯಾಗಿದೆ.

ತ್ರಿಪುರಾಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಗಳು ಭಾರೀ ಮಳೆಯ ಕಾರಣ ಗುಡ್ಡ ಕುಸಿದು ಬಂದ್ ಆಗಿವೆ. ಪೆಟ್ರೋಲ್, ಡೀಸೆಲ್ ಪೂರೈಕೆ ಮಾಡುವ ಟ್ಯಾಂಕರ್ ಗಳು ತ್ರಿಪುರಾ ತಲುಪಲು ಸಾಧ್ಯವಾಗದ ಕಾರಣ ಪೆಟ್ರೋಲ್ ಲೀಟರ್ ಗೆ 300 ರೂ. ಡೀಸೆಲ್ ಲೀಟರ್ ಗೆ 150 ರೂಪಾಯಿಗೆ ಮಾರಾಟವಾಗುತ್ತಿದೆ. ಕೆಲವು ಕಡೆಗಳಲ್ಲಿ ಹೆಚ್ಚು ಹಣ ಕೊಟ್ಟರೂ ಪೆಟ್ರೋಲ್, ಡೀಸೆಲ್ ಸಿಗುತ್ತಿಲ್ಲ. ಇದರೊಂದಿಗೆ ಆಹಾರ ಸಾಮಗ್ರಿಗಳು ಕೂಡ ಸಿಗದಂತಾಗಿದ್ದು, ಬೆಲೆ ಭಾರೀ ದುಬಾರಿಯಾಗಿದೆ ಎಂದು ಹೇಳಲಾಗಿದೆ.

ಗುಡ್ಡ ಕುಸಿದು, ಮರ ಬಿದ್ದು ಸಂಪರ್ಕ ಕಳೆದುಕೊಂಡಿರುವ ರಸ್ತೆಗಳಲ್ಲಿ ಸಾಮಗ್ರಿ ಪೂರೈಕೆ ಮಾಡುವ ಟ್ರಕ್ ಗಳು, ಅಲ್ಲಲ್ಲೇ ಸಾಲುಗಟ್ಟಿ ನಿಂತಿವೆ. ನಿರಂತರವಾಗಿ ಧಾರಾಕಾರ ಮಳೆಯಾಗುತ್ತಿರುವುದರಿಂದ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಲು ಕೂಡ ಸಾಧ್ಯವಾಗಿಲ್ಲ. ಹಾಗಾಗಿ ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...