alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಲಾಕ್ ಮ್ಯಾಜಿಕ್ ತೆಗೆಯಲು ನಗ್ನ ಫೋಟೋ ಕಳಿಸಿ ಎಂದ ಬಾಬಾ

ದೆಹಲಿ ಪೊಲೀಸರು ಯುವತಿ ದೂರಿನ ವೇಳೆ ಕಳ್ಳ ಬಾಬಾ ಒಬ್ಬನ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಕಳ್ಳ ಬಾಬಾ ಯುವತಿಯ ನ್ಯೂಡ್ ಫೋಟೋ ಕೇಳಿದ್ದ ಎನ್ನಲಾಗಿದೆ. 32 ವರ್ಷದ ಯುವತಿ ಗ್ರಂಥಾಲಯದಲ್ಲಿ ಕೆಲಸ ಮಾಡ್ತಿದ್ದು, ಮದುವೆಗೆ ಹಿನ್ನೆಡೆಯಾಗ್ತಿದೆ. ಇದೇ ಕಾರಣಕ್ಕೆ ಆಕೆ ಬಾಬಾ ಬಳಿ ಹೋಗಿದ್ದಳು ಎನ್ನಲಾಗಿದೆ.

ಸಂಬಂಧಿಕರ ಸಲಹೆ ಮೇರೆಗೆ ಯುವತಿ ಈ ಬಾಬಾನ ಬಳಿ ಹೋಗಿದ್ದಳಂತೆ. ಕೆಲ ದಿನಗಳಲ್ಲಿಯೇ ನಂಬರ್ ಒಂದರಿಂದ ಕರೆ ಬಂತಂತೆ. ಕರೆ ಮಾಡಿದ ವ್ಯಕ್ತಿ ಆಕೆಯ ಮಾಹಿತಿ ಹಾಗೂ ಫೋಟೋ ಕೇಳಿದ್ದನಂತೆ. ಹುಡುಗಿ ಫೋಟೋ ಕಳುಹಿಸಿದ್ದಾಳೆ. ಕೆಲ ದಿನಗಳಲ್ಲಿ ಮತ್ತೆ ಕರೆ ಬಂದಿದೆ.

ನಿನಗೆ ಮಾಟ ಮಾಡಿದ್ದು ಅದನ್ನು ಹೋಗಲಾಡಿಸಲು ನಗ್ನ ಫೋಟೋ ಕಳುಹಿಸು ಎಂದು ಕರೆ ಮಾಡಿದ ವ್ಯಕ್ತಿ ಹೇಳಿದ್ದಾನಂತೆ. ಜೊತೆಗೆ ಒಂದು ನಗ್ನ ಫೋಟೋವನ್ನು ಕಳುಹಿಸಿದ್ದನಂತೆ. ಸುಮಾರು ಮೂರು ತಿಂಗಳುಗಳ ಕಾಲ ಇದೇ ವಿಷ್ಯ ಇಬ್ಬರ ಮಧ್ಯೆ ಚರ್ಚೆಯಾಗಿದೆ. ನಂತ್ರ ಯುವತಿ ಮನೆಯವರು ಹಾಗೂ ಪೊಲೀಸರಿಗೆ ವಿಷ್ಯ ತಿಳಿಸಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...