alex Certify
ಕನ್ನಡ ದುನಿಯಾ       Mobile App
       

Kannada Duniya

ಫೇಸ್ಬುಕ್ ಗೆ ಮುಟ್ಟಿನ ಕಲೆಯುಳ್ಳ ಪ್ಯಾಂಟ್ ಅಪ್ ಲೋಡ್ ಮಾಡಿದ ಹುಡುಗಿ

Anushka Dasgupta

ಈಗಲೂ ಸಮಾಜದಲ್ಲಿ ಮುಟ್ಟಿನ ಬಗ್ಗೆ ಮಡಿವಂತಿಕೆ ಇದೆ. ಇದನ್ನು ಮಹಿಳೆಯರು ಮುಚ್ಚಿಡಲು ಯತ್ನಿಸುತ್ತಾರೆ, ಹಾಗೆ ನಾಚಿಕೊಳ್ತಾರೆ. ಆದ್ರೆ ಭಾರತೀಯ ಹುಡುಗಿಯೊಬ್ಬಳು ಹೊಸ ರೀತಿಯಲ್ಲಿ ಹೋರಾಟಕ್ಕಿಳಿದಿದ್ದಾಳೆ. ಋತುಮತಿಯಾದಾಗ ಕಲೆಯಾದ ಪ್ಯಾಂಟೊಂದನ್ನು ಫೇಸ್ಬುಕ್ ಗೆ ಅಪ್ ಲೋಡ್ ಮಾಡಿದ್ದಾಳೆ.

ಕೋಲ್ಕತಾದ ಪ್ರೌಢಶಾಲಾ ವಿದ್ಯಾರ್ಥಿನಿ ಅನುಷ್ಕಾ ದಾಸ್ ಗುಪ್ತಾ ತನ್ನ ಪ್ಯಾಂಟನ್ನು ಫೇಸ್ಬುಕ್ ಗೆ ಹಾಕಿರುವ ಹುಡುಗಿ. ರಕ್ತದ ಕಲೆಯುಳ್ಳ ಫೋಟೋವೊಂದೇ ಅಲ್ಲ ಜೊತೆಗೆ ಫೇಸ್ಬುಕ್ ನಲ್ಲಿ ಬರೆದಿರುವ ಆಕೆಯ ಶಬ್ದಗಳು ಸಾಕಷ್ಟು ಚರ್ಚೆಗೆ ಕಾರಣವಾಗಿವೆ. ಹೆಣ್ಣಾಗಿರುವುದಕ್ಕೆ ನಾನು ನಾಚಿಕೆ ಪಡುವುದಿಲ್ಲ. ಹಾಗಾಗಿ ನಾನು ಈ ಫೋಟೋ ಹಾಕಿದ್ದೇನೆ. ಇದು ನನ್ನ ಆ ದಿನದ ಸಾಕ್ಷಿ ಎಂದಿದ್ದಾಳೆ ಅನುಷ್ಕಾ.

ಒಂದು ದಿನ ಅನುಷ್ಕಾ ಲೋಕಲ್ ಟ್ರೈನಲ್ಲಿ ಪ್ರಯಾಣ ಮಾಡುತ್ತಿದ್ದಳಂತೆ. ಆಗ ತಿಂಗಳ ಸಮಸ್ಯೆ ಶುರುವಾಗಿದೆ. ಸ್ಯಾನಿಟರಿ ಪ್ಯಾಡ್ ಇಲ್ಲದ ಕಾರಣ ಪ್ಯಾಂಟ್ ಕಲೆಯಾಗಿದೆ. ಅಲ್ಲಿಯೇ ಇದ್ದ ಮಹಿಳೆಯೊಬ್ಬಳು ಪ್ಯಾಡ್ ನೀಡಿದ್ದಾರೆ. ಜೊತೆಗೆ ತನ್ನ ವೇಲ್ ನಲ್ಲಿ ಇದನ್ನು ಮುಚ್ಚಿಕೋ ಎಂದು ಸಲಹೆ ನೀಡಿದ್ದಾರೆ. ಅಕ್ಕ-ಪಕ್ಕ ಕುಳಿತಿದ್ದ ಪುರುಷರು ಅವಹೇಳನ ಮಾಡಿದ್ದರಂತೆ. ಕೆಟ್ಟದಾಗಿ ಕಮೆಂಟ್ ಮಾಡಿದ್ದರಂತೆ. ತಾನು ಅನುಭವಿಸಿದ ಆ ಸಂದರ್ಭವನ್ನು ಫೇಸ್ಬುಕ್ ನಲ್ಲಿ ವಿವರಿಸಿರುವ ಅನುಷ್ಕಾ, ಪುರುಷರಿಗೆ ನಾಚಿಕೆಯಾಗುವುದಿಲ್ಲವೇ ಎಂದು ಕೇಳಿದ್ದಾಳೆ.

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವ ಪುರುಷರಿಗೆ ನಾಚಿಕೆ ಆಗುವುದಿಲ್ಲವೇ ಎಂಬ ಪ್ರಶ್ನೆ ಕೇಳಿದ್ದಾಳೆ ಅನುಷ್ಕಾ. ಇದು ಬೇರೆಯ ಸಮಸ್ಯೆ. ಮುಟ್ಟು ಮಹಿಳೆಗೆ ಒಂದು ಸ್ವಾಭಾವಿಕ ಪ್ರಕ್ರಿಯೆ. ಮಾತೃತ್ವ, ಸಂಪೂರ್ಣ ಮಹಿಳೆ ಮತ್ತು ವಿಕಾಸದ ಒಂದು ಸಂಕೇತ. ಮುಟ್ಟನ್ನು ಮುಚ್ಚಿಡಲು ಯತ್ನಿಸುವ, ನಾಚಿಕೆ ಪಡುವ ಮಹಿಳೆಯರಿಗೆ ಇದೊಂದು ಸಂದೇಶ ಎಂದಿದ್ದಾಳೆ ಅನುಷ್ಕಾ. ಸ್ವಚ್ಛವಾಗಿರುವುದು ಅವಶ್ಯಕ. ಆದ್ರೆ ನಾಚಿಕೊಳ್ಳುವ ಅವಶ್ಯಕತೆ ಇಲ್ಲ ಎಂದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...