alex Certify
ಕನ್ನಡ ದುನಿಯಾ       Mobile App
       

Kannada Duniya

ಸುಪ್ರೀಂ ಆದೇಶದ ಮಧ್ಯೆಯೇ ಸಿಡಿದ ಪಟಾಕಿ: ಮತ್ತಷ್ಟು ಹದಗೆಟ್ಟ ದೆಹಲಿ

ದೆಹಲಿ ಜನರ ಬದುಕು ಮತ್ತಷ್ಟು ದುಸ್ತರವಾಗಿದೆ. ದೆಹಲಿ ವಾತಾವರಣ ಇನ್ನಷ್ಟು ವಿಷವಾಗಿದೆ. ಉಸಿರಾಡುವುದೂ ಕಷ್ಟವಾಗಿದೆ. ದೀಪಾವಳಿಗೂ ಮೊದಲು ಪಟಾಕಿ ಸಿಡಿಸಲು ಆಸಕ್ತಿ ತೋರದ ದೆಹಲಿ ಜನರು ಬುಧವಾರ ವರಸೆ ಬದಲಿಸಿದ್ದರು. ಬುಧವಾರ ಒಂದೇ ಸಮನೆ ಪಟಾಕಿ ಸಿಡಿದಿದೆ. ಇದ್ರಿಂದಾಗಿ ದೆಹಲಿ ವಾತಾವರಣ ಮತ್ತಷ್ಟು ವಿಷವಾಗಿದೆ.

ಸೌತ್ ಬ್ಲಾಕ್ ಸುತ್ತಮುತ್ತಲ ಪ್ರದೇಶದಲ್ಲಿ ಜನರು ಉಸಿರಾಡೋದು ಕಷ್ಟವಾಗ್ತಿದೆ. ಸುಪ್ರೀಮ್ ಕೋರ್ಟ್ ಪಟಾಕಿ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಸೂಚನೆ ನೀಡಿದೆ. ಕೇವಲ ರಾತ್ರಿ 8 ರಿಂದ 10 ರವರೆಗೆ ಮಾತ್ರ ಪಟಾಕಿ ಸಿಡಿಸಬೇಕು. ದೆಹಲಿಯಲ್ಲಿ ಹಸಿರು ಪಟಾಕಿ ಸಿಡಿಯಬೇಕೆಂದು ಆದೇಶ ನೀಡಿದೆ. ಆದ್ರೆ ಸುಪ್ರೀಂ ಕೋರ್ಟ್ ಆದೇಶಕ್ಕೆ ಕವಡೆ ಕಿಮ್ಮತ್ತು ಸಿಗಲಿಲ್ಲ. ಅನೇಕ ಪ್ರದೇಶಗಳಲ್ಲಿ ಸಂಜೆಯಾಗ್ತಿದ್ದಂತೆ ಪಟಾಕಿ ಸಿಡಿಯಲು ಶುರುವಾಗಿದೆ.

ಇಂದು ಬೆಳಿಗ್ಗೆ ಏರ್ ಕ್ವಾಲಿಟಿ ಇಂಡೆಕ್ಸ್ 2.5805 ರಷ್ಟು ದಾಖಲಾಗಿದೆ. ದೆಹಲಿಯ ಕೆಲ ಇಲಾಖೆಯಲ್ಲಿ AQI 900ಕ್ಕಿಂತ ಹೆಚ್ಚಾಗಿದೆ. ಬುಧವಾರ ಬೆಳಿಗ್ಗೆ ಎಕ್ಯೂಐ ಮಟ್ಟ ಕಡಿಮೆಯಿತ್ತು. ರಾತ್ರಿಯಾಗ್ತಿದ್ದಂತೆ ಇದ್ರ ಮಟ್ಟ 500 ರ ಗಡಿದಾಟಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...