alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ರಾಯಭಾರಿ ಕಛೇರಿಗೆ ಹರಿದು ಬರುತ್ತಿದೆ ಚಪ್ಪಲಿ ರಾಶಿ

ಕುಲಭೂಷಣ್ ಜಾಧವ್ ಭೇಟಿಗಾಗಿ ಆಗಮಿಸಿದ್ದ ಅವರ ತಾಯಿಯ ಬೂಟುಗಳನ್ನು ಪಾಕಿಸ್ತಾನ ಕಸಿದಿಟ್ಟುಕೊಂಡಿದೆ. ಶೂ ನಲ್ಲಿ ಲೋಹದ ವಸ್ತುವಿತ್ತು ಅಂತಾ ಸುಳ್ಳು ಆರೋಪ ಕೂಡ ಮಾಡಿದೆ.

ಪಾಕಿಸ್ತಾನದ ಈ ಅಮಾನವೀಯ ವರ್ತನೆ ಭಾರತೀಯರನ್ನು ಕೆರಳಿಸಿದೆ. ದೆಹಲಿ ಬಿಜೆಪಿಯ ವಕ್ತಾರ ತೇಜಿಂದರ್ ಬಗ್ಗಾ, ಪಾಕಿಸ್ತಾನ ರಾಯಭಾರ ಕಚೇರಿಗೆ ಆನ್ ಲೈನ್ ನಲ್ಲಿ ಚಪ್ಪಲಿ ಆರ್ಡರ್ ಮಾಡಿದ್ದಾರೆ.

ಅದನ್ನು ಉಡುಗೊರೆಯಾಗಿ ಕಳಿಸಿಕೊಡುತ್ತಿದ್ದಾರೆ. ಸ್ಕ್ರೀನ್ ಶಾಟ್ ಶೇರ್ ಮಾಡಿರೋ ತೇಜಿಂದರ್, ಎಲ್ಲರೂ ಈ ರೀತಿ ಮಾಡುವ ಮೂಲಕ ಪಾಕ್ ವಿರುದ್ಧ ಪ್ರತಿಭಟಿಸೋಣ ಅಂತಾ ಕರೆ ನೀಡಿದ್ದಾರೆ.

ಇದರ ಬೆನ್ನಲ್ಲೇ ಹಲವಾರು ಟ್ವಿಟ್ಟರ್ ಬಳಕೆದಾರರು ಕೂಡ ಪಾಕ್ ರಾಯಭಾರ ಕಚೇರಿಗೆ ಆನ್ ಲೈನ್ ನಲ್ಲಿ ಶೂ ಮತ್ತು ಚಪ್ಪಲಿಗಳನ್ನು ಆರ್ಡರ್ ಮಾಡಿದ್ದಾರೆ. ಅದರ ಸ್ಕ್ರೀನ್ ಶಾಟ್ ಕೂಡ ಶೇರ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...