alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಮುಕರಿಗೆ ನಡು ರಸ್ತೆಯಲ್ಲೇ ಕಪಾಳಮೋಕ್ಷ

ಭೋಪಾಲ್ ನಲ್ಲಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ ನಾಲ್ವರು ಕಾಮುಕರನ್ನು ಬಂಧಿಸಿದ ಪೊಲೀಸರು, ಅವರನ್ನು ಮೆರವಣಿಗೆ ಮಾಡಿದ್ದಾರೆ. ರಸ್ತೆಯಲ್ಲಿ ಮೆರವಣಿಗೆ ಹೋಗುತ್ತಿದ್ದ ಆರೋಪಿಗಳಿಗೆ ಸಾರ್ವಜನಿಕರು ಕಪಾಳ ಮೋಕ್ಷ ಮಾಡಿದ್ದಾರೆ.

ಮಹಿಳೆಯೊಬ್ಬಳ ಮೇಲೆ ಆಕೆಯ ಮಾಜಿ ಪ್ರಿಯಕರ ಹಾಗೂ ಅವನ ಗೆಳೆಯ ಅತ್ಯಾಚಾರ ಮಾಡಿದ್ದರು. ಈ ಕೃತ್ಯಕ್ಕೆ ಸಹಕರಿಸಿದ ಇಬ್ಬರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಕಡಿವಾಣ ಹಾಕುವಂತೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸೂಚಿಸಿದ್ದರು.

ಹಾಗಾಗಿ ಈ ರೀತಿ ಕಾಮುಕರನ್ನು ರಸ್ತೆಯಲ್ಲಿ ಮೆರವಣಿಗೆ ಮಾಡಲಾಗಿದೆ. ಮಹತ್ವದ ವಿಷಯ ಮಾತನಾಡುವುದಿದೆ ಅಂತಾ ಮಹಿಳೆಯನ್ನು ಮಾಜಿ ಪ್ರಿಯಕರ ರೆಸ್ಟೋರೆಂಟ್ ಗೆ ಬರಹೇಳಿದ್ದ. ಅಲ್ಲಿಗೆ ಬರುತ್ತಿದ್ದಂತೆ ಅವಳ ಮೊಬೈಲ್ ಕಿತ್ತುಕೊಂಡಿದ್ದಾನೆ.

ಮೊಬೈಲ್ ವಾಪಸ್ ಬೇಕು ಅಂತಾದ್ರೆ ನನ್ನ ಜೊತೆಗೆ ಸ್ನೇಹಿತನ ಮನೆಗೆ ಬಾ ಎಂದಿದ್ದಾನೆ. ಅನಿವಾರ್ಯವಾಗಿ ಮೋಟರ್ ಸೈಕಲ್ ಏರಿ ಮಹಿಳೆ ಅವನ ಜೊತೆಗೆ ತೆರಳಿದ್ದಾಳೆ. ಅಲ್ಲಿ ಇಬ್ಬರೂ ಸೇರಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...