alex Certify
ಕನ್ನಡ ದುನಿಯಾ       Mobile App
       

Kannada Duniya

ಬೆತ್ತಲಾದ್ರೆ ಸಿಗುತ್ತಾ ವೀಸಾ: ಕೇಂದ್ರ ಸಚಿವ ಹೇಳಿದ್ದೇನು…?

ಪೆಟ್ರೋಲ್, ಡೀಸೆಲ್ ಬೆಲೆ ದುಬಾರಿಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಹಿಂದೊಮ್ಮೆ ವಿವಾದಿತ ಹೇಳಿಕೆ ನೀಡಿದ್ದ ಕೇಂದ್ರ ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಕೆ.ಜೆ. ಆಲ್ಫೋನ್ಸ್ ಮತ್ತೊಮ್ಮೆ ವಿವಾದಿತ ಹೇಳಿಕೆ ನೀಡಿದ್ದಾರೆ.

ಆಧಾರ್ ಗಾಗಿ ಮಾಹಿತಿ ಕೇಳಿದ್ರೆ ಖಾಸಗಿತನ ಉಲ್ಲಂಘನೆಯಾಗುತ್ತದೆ ಎನ್ನುತ್ತಾರೆ. ಆದರೆ, ವೀಸಾಗಾಗಿ ಬೆತ್ತಲಾಗುತ್ತಾರೆ ಎಂದು ಕೆ.ಜೆ. ಆಲ್ಫೋನ್ಸ್ ಹೇಳಿದ್ದಾರೆ.

ಕೊಚ್ಚಿಯಲ್ಲಿ ನಡೆದ ಫ್ಯೂಚರ್ ಗ್ಲೋಬಲ್ ಡಿಜಿಟಲ್ ಸಮಾವೇಶದಲ್ಲಿ ಅವರು ಮಾತನಾಡುತ್ತಾ, ವಿದೇಶದ ವೀಸಾ ಪಡೆಯಲು ಬೆತ್ತಲಾಗುವ ಜನ, ಆಧಾರ್ ಗೆ ಹೆಸರು, ವಿಳಾಸ ಕೇಳಿದ್ರೇ ಖಾಸಗಿತನ ಎನ್ನುತ್ತಾರೆ. ಅಮೆರಿಕದಲ್ಲಿ ವೀಸಾ ಪಡೆಯಲು ಸುಮಾರು 10 ಪುಟಗಳ ಮಾಹಿತಿ ನೀಡಬೇಕಿದೆ. ಅಲ್ಲಿ ಬೆತ್ತಲಾಗಿ ನಿಲ್ಲಲು ಹಿಂಜರಿಕೆ ಕಾಣುವುದಿಲ್ಲ, ಇಲ್ಲಿ ಆಧಾರ್ ವಿಷಯದಲ್ಲಿ ಖಾಸಗಿತನದ ನೆಪ ಹೇಳುತ್ತಾರೆ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.

ಜನರ ಖಾಸಗಿ ಮಾಹಿತಿಗಳನ್ನು ಖಾಸಗಿಯವರಿಗೆ ನೀಡುವುದಿಲ್ಲ. ಇದು ತಪ್ಪು ಮಾಹಿತಿಯಾಗಿದೆ. ಆಧಾರ್ ಮಾಹಿತಿ ಸುರಕ್ಷಿತವಾಗಿದೆ. ಅದು ಸೋರಿಕೆಯಾಗುವುದಿಲ್ಲ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...