alex Certify
ಕನ್ನಡ ದುನಿಯಾ       Mobile App
       

Kannada Duniya

ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ನೋಡುವವರಿಗೊಂದು ಗುಡ್ ನ್ಯೂಸ್

ಆಂಧ್ರಪ್ರದೇಶದ ಸರ್ಕಾರ, ಸಿನಿಮಾ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದೆ. ಇನ್ಮುಂದೆ ಸಿನಿಮಾ ಅಭಿಮಾನಿಗಳು ಮಲ್ಟಿಪ್ಲೆಕ್ಸ್ ಗಳಿಗೆ ಮನೆಯ ತಿಂಡಿಯನ್ನು ತೆಗೆದುಕೊಂಡು ಹೋಗಬಹುದಾಗಿದೆ. ವಿಜಯವಾಡದ ಗ್ರಾಹಕರ ವಿವಾದಗಳ ಪರಿಹಾರ ವೇದಿಕೆ ಇದಕ್ಕೆ ಅನುಮತಿ ನೀಡಿದೆ.

ಕನ್ಸ್ಯೂಮರ್ ಗೈಡೆನ್ಸ್ ಸೊಸೈಟಿ ಮತ್ತು 5 ಕಾರ್ಯಕರ್ತರು ನೀಡಿದ ದೂರಿನ ವಿಚಾರಣೆ ವೇಳೆ ಈ ಅನುಮತಿ ನೀಡಲಾಗಿದೆ. ಮಲ್ಟಿಪ್ಲೆಕ್ಸ್ ಗಳಲ್ಲಿ ಮಾರುಕಟ್ಟೆಗಿಂತ ದುಪ್ಪಟ್ಟು ಹಣವನ್ನು ವಸೂಲಿ ಮಾಡಲಾಗುತ್ತದೆ ಎಂದು ದೂರು ನೀಡಲಾಗಿತ್ತು.

ಮಲ್ಟಿಪ್ಲೆಕ್ಸ್ಗಳಲ್ಲಿ ಮಾರುಕಟ್ಟೆ ದರದಲ್ಲಿ ಅಥವಾ ಸ್ವಲ್ಪ ಹೆಚ್ಚಳ ಮಾಡಿ ಆಹಾರ ಮಾರಾಟ ಮಾಡಿ. ಜೊತೆಗೆ ಕುಡಿಯುವ ನೀರನ್ನು ಉಚಿತವಾಗಿ ನೀಡಿ ಎಂದು ಆದೇಶ ಮಾಡಿದೆ. ಆಂಧ್ರಪ್ರದೇಶಕ್ಕಿಂತ ಮೊದಲು ಮಹಾರಾಷ್ಟ್ರದಲ್ಲಿ ಸಿನಿಮಾ ಹಾಲ್ ಗಳಿಗೆ ಮನೆ ಆಹಾರ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ. ಆಗಸ್ಟ್ 1ರಿಂದಲೇ ಇದು ಜಾರಿಗೆ ಬಂದಿದೆ.

ಬುಧವಾರ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಮಲ್ಟಿಪ್ಲೆಕ್ಸ್ ಮಾಲೀಕರಿಗೆ ಛೀಮಾರಿ ಹಾಕಿದೆ. ಮನೆ ಆಹಾರ ತೆಗೆದುಕೊಂಡು ಬರಲು ಅನುಮತಿ ನೀಡಿ. ಮಕ್ಕಳಿಗೆ ಜಂಕ್ ಫುಡ್ ಸೇವನೆ ಮಾಡಲು ನೀವು ಪ್ರೋತ್ಸಾಹಿಸುತ್ತಿದ್ದೀರೆಂದು ಆರೋಪಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...