alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್! ಉಚಿತವಾಗಿ ಸಿಗ್ತಿದೆ ಗ್ಯಾಸ್ ಕನೆಕ್ಷನ್

ಇನ್ನೂ ಗ್ಯಾಸ್ ಸಂಪರ್ಕ ಹೊಂದಿಲ್ಲದವರಿಗೆ ಇಲ್ಲೊಂದು ಖುಷಿ ಸುದ್ದಿಯಿದೆ. ಬಡವರಿಗೆ ನೆರವಾಗಲು 2016ರಲ್ಲಿ ಶುರುವಾದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಗ್ರಾಮ್ ಸ್ವರಾಜ್ ಅಭಿಯಾನ ಶುರುವಾಗ್ತಿದೆ. ಏಪ್ರಿಲ್ 14ರಿಂದ ಈ ಅಭಿಯಾನ ಶುರುವಾಗಲಿದೆ. ಇದ್ರಡಿ ಬಡ ಮಹಿಳೆಯರು ಉಚಿತವಾಗಿ ಗ್ಯಾಸ್ ಕನೆಕ್ಷನ್ ಪಡೆಯಬಹುದಾಗಿದೆ.

ಮನೆಯಲ್ಲಿ ಗ್ಯಾಸ್ ಸಂಪರ್ಕ ಹೊಂದಿರದೆ ಇರುವವರು ಇದ್ರ ಲಾಭ ಪಡೆಯಬಹುದಾಗಿದೆ. ಮಹಿಳೆಯರ ಸಬಲೀಕರಣ ಹಾಗೂ ಮಹಿಳೆಯರ ಆರೋಗ್ಯವನ್ನು ರಕ್ಷಿಸಲು ಈ ಅಭಿಯಾನ ಶುರುವಾಗಲಿದೆ. ಕೇಂದ್ರ ಸರ್ಕಾರದ ಈ ಯೋಜನೆಯಡಿ ಶೀಘ್ರವೇ ಬಡ ಮಹಿಳೆಯರಿಗೆ ಕಟ್ಟಿಗೆ ಒಲೆಯ ಹೊಗೆಯಿಂದ ಮುಕ್ತಿ ಸಿಗಲಿದೆ.

ಉಚಿತ ಎಲ್ ಪಿ ಜಿ ಕನೆಕ್ಷನ್ ಪಡೆಯಲು ಅರ್ಜಿ ಸಲ್ಲಿಸುವುದು ಸರಳ. ಕಡು ಬಡ ಮಹಿಳೆಯರು ಅರ್ಜಿ ತುಂಬಿ ಸ್ಥಳೀಯ ಎಲ್ಪಿಜಿ ಕೇಂದ್ರಕ್ಕೆ ನೀಡಬೇಕು. ಅರ್ಜಿ ಪತ್ರ ಎಲ್ಪಿಜಿ ಕಚೇರಿಯಲ್ಲಿ ಉಚಿತವಾಗಿ ಸಿಗಲಿದೆ. ಆನ್ಲೈನ್ ಮೂಲಕವೂ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಅವಶ್ಯಕ ದಾಖಲೆಗಳನ್ನು ಅರ್ಜಿ ಜೊತೆ ನೀಡಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...