alex Certify
ಕನ್ನಡ ದುನಿಯಾ       Mobile App
       

Kannada Duniya

ದಂಗಾಗುವಂತಿದೆ ಈ ಪ್ಯೂನ್ ಸಂಪಾದಿಸಿದ ಅಕ್ರಮ ಆಸ್ತಿ

ಹೈದರಾಬಾದ್: ಆಂಧ್ರಪ್ರದೇಶದ ಭ್ರಷ್ಟಾಚಾರ ನಿಗ್ರಹದಳ(ಎ.ಸಿ.ಬಿ.) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ನೆಲ್ಲೂರಿನ ಸಾರಿಗೆ ಇಲಾಖೆ ಕಚೇರಿಯಲ್ಲಿ ಪ್ಯೂನ್ ಆಗಿರುವ ಕೆ. ನರಸಿಂಹರೆಡ್ಡಿ ಆದಾಯ ಮೀರಿ ಆಸ್ತಿ ಸಂಪಾದನೆ ಮಾಡಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನರಸಿಂಹರೆಡ್ಡಿ ಬರೋಬ್ಬರಿ 100 ಕೋಟಿ ರೂ. ಮೌಲ್ಯದ ಆಸ್ತಿ, 2 ಕೆ.ಜಿ. ಚಿನ್ನಾಭರಣ, 7 ಕೆ.ಜಿ. ಬೆಳ್ಳಿ  ಹೊಂದಿರುವುದು ಪತ್ತೆಯಾಗಿದೆ.

ಎ.ಸಿ.ಬಿ. ಅಧಿಕಾರಿಗಳು ಏಕಕಾಲಕ್ಕೆ ನರಸಿಂಹ ರೆಡ್ಡಿಗೆ ಸೇರಿದ 6 ಸ್ಥಳಗಳ ಮೇಲೆ ದಾಳಿ ಮಾಡಿದ್ದು, ದಾಳಿಯ ಸಂದರ್ಭದಲ್ಲಿ ಆದಾಯವನ್ನು ಮೀರಿ ಅಪಾರ ಪ್ರಮಾಣದಲ್ಲಿ ಅಕ್ರಮ ಸಂಪತ್ತು ಹೊಂದಿರುವುದು ಗೊತ್ತಾಗಿದೆ.

50 ಎಕರೆ ಕೃಷಿ ಭೂಮಿ ಹೊಂದಿರುವ ರೆಡ್ಡಿ, 18 ವಸತಿ ಸಮುಚ್ಚಯ ಕೂಡ ಹೊಂದಿರುವ ದಾಖಲೆ ಪತ್ತೆಯಾಗಿವೆ. ನರಸಿಂಹ ರೆಡ್ಡಿಯನ್ನು ಬಂಧಿಸಿದ್ದು, ಸೇವೆಯಿಂದ ಅಮಾನತು ಮಾಡಲಾಗಿದೆ. ಚುನಾವಣೆಗೆ ಸ್ಪರ್ಧಿಸುತ್ತಿದ್ದವರಿಗೆ ಈತ ಹಣಕಾಸು ನೆರವು ನೀಡುತ್ತಿದ್ದ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...