alex Certify
ಕನ್ನಡ ದುನಿಯಾ       Mobile App
       

Kannada Duniya

ಕೃಷಿಕ ಬೇಡ್ವಂತೆ ಈ ಹುಡುಗಿಯರಿಗೆ…!

ಮದುವೆಯಾಗುವ ಹುಡುಗ ಹೇಗಿರಬೇಕೆನ್ನುವ ಬಗ್ಗೆ ಪ್ರತಿಯೊಬ್ಬ ಹುಡುಗಿಯರೂ ಕನಸು ಕಾಣ್ತಾರೆ. ಕನಸಿನ ರಾಜಕುಮಾರನಿಗಾಗಿ ಹುಡುಕಾಟ ನಡೆಸ್ತಾರೆ. ಅದೃಷ್ಟವಿರುವವರಿಗೆ ಅವರು ಬಯಸಿದ ಹುಡುಗ ಸಿಗ್ತಾನೆ. ಆದ್ರೆ ಎಲ್ಲರೂ ಒಂದೇ ರೀತಿ ಡಿಮ್ಯಾಂಡ್ ಮಾಡಿದ್ರೆ ಸಾಮಾನ್ಯ ಹುಡುಗರ ಸ್ಥಿತಿ ಹೇಗಾಗಬೇಡ.

ಇತ್ತೀಚಿಗೆ ಮಹಾರಾಷ್ಟ್ರದಲ್ಲಿ ಕೃಷಿಕರನ್ನು ಮದುವೆಯಾಗುವವರೇ ಇಲ್ಲ ಎನ್ನುವಂತಾಗಿದೆ. ಬಹುತೇಕ ಹುಡುಗಿಯರು ಸರ್ಕಾರ ಅಥವಾ ಖಾಸಗಿ ಕಂಪನಿಯಲ್ಲಿ ಪಿಯೂನ್ ಆದ್ರೂ ಸರಿ ಕೃಷಿಕ ಹುಡುಗ ಬೇಡ ಎನ್ನುತ್ತಿದ್ದಾರೆ. ಇದನ್ನು ನಾವು ಹೇಳ್ತಿಲ್ಲ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಕೃಷಿಕರೇ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. 36 ವರ್ಷದ ವ್ಯಕ್ತಿಯೊಬ್ಬನಿಗೆ 8 ಎಕರೆ ನೀರಾವರಿ ಜಮೀನಿದೆ. ಆದ್ರೆ ಮದುವೆ ಭಾಗ್ಯ ಮಾತ್ರ ಒಲಿದು ಬರಲಿಲ್ಲ. ಸುಮಾರು 30ಕ್ಕೂ ಹೆಚ್ಚು ಹೆಣ್ಣನ್ನು ಕಿಶೋರ್ ನೋಡಿದ್ದಾನಂತೆ. ಆದ್ರೆ ಎಲ್ಲ ಹುಡುಗಿಯರೂ ಹುಡುಗ ಕೃಷಿಕ. ಹಾಗಾಗಿ ಬೇಡ ಎನ್ನುತ್ತಿದ್ದಾರಂತೆ.

ಇದು ಕೇವಲ ಮಹಾರಾಷ್ಟ್ರ ಹುಡುಗರ ಕಥೆಯೊಂದೇ ಅಲ್ಲ ಕರ್ನಾಟಕದ ಅನೇಕ ಭಾಗಗಳಲ್ಲಿ ಹುಡುಗರು ಇದೇ ಸಮಸ್ಯೆ ಎದುರಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...