alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಡಿಪಿ ಮುಖಂಡನ ಮೇಲೆ ಉಗ್ರರ ದಾಳಿ

abdul-q_650x400_81495643262

ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಭಯೋತ್ಪಾದಕರು ಪಿಡಿಪಿ ಮುಖಂಡನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡೇಟು ತಿಂದಿರುವ ಅಬ್ದುಲ್ ಕಯೂಮ್ ಸ್ಥಿತಿ ಚಿಂತಾಜನಕವಾಗಿದೆ. ಶ್ರೀನಗರದ ಬರ್ಜುಲ್ಲಾ ಎಂಬಲ್ಲಿ ಅಬ್ದುಲ್ ಕಯೂಮ್ ನಿವಾಸವಿದೆ. ಮನೆಯ ಹೊರಗಡೆಯೇ ಈ ದಾಳಿ ನಡೆದಿದೆ.

ಕಯೂಮ್ ಅವರ ಸಮೀಪದಲ್ಲೇ ನಿಂತುಕೊಂಡು ಉಗ್ರನೊಬ್ಬ ಮೂರು ಗುಂಡುಗಳನ್ನು ಹಾರಿಸಿದ್ದಾನೆ. ಅವರನ್ನು ಆಸ್ಪತ್ರೆಗೆ ದಾಖಲಾಗಿದ್ದು, ಶಸ್ತ್ರಚಿಕಿತ್ಸೆ ನಡೆಸಿ ಗುಂಡುಗಳನ್ನು ಹೊರತೆಗೆಯಲಾಗಿದೆ. ಆದ್ರೆ ಕಯೂಮ್ ಆರೋಗ್ಯ ಸ್ಥಿರವಾಗಿದೆ ಅಂತಾ ವೈದ್ಯರು ತಿಳಿಸಿದ್ದಾರೆ. ನಿನ್ನೆ ಸಂಜೆ ವೇಳೆಗೆ ಈ ದಾಳಿ ನಡೆದಿದೆ.

ಇದಕ್ಕೂ ಮುನ್ನ ಶೋಪಿಯಾನ್ ಜಿಲ್ಲೆಯಲ್ಲಿ ಪೊಲೀಸ್ ಕ್ಯಾಂಪ್ ಮೇಲೆ ಉಗ್ರರು ಗ್ರೆನೇಡ್ ಎಸೆದಿದ್ರು. ಈ ದಾಳಿಯಲ್ಲಿ ಐವರು ನಾಗರೀಕರು ಗಾಯಗೊಂಡಿದ್ದಾರೆ. ಟಾರ್ಗೆಟ್ ಮಿಸ್ ಆಗಿದ್ದು, ಗ್ರೆನೇಡ್ ರಸ್ತೆಯಲ್ಲಿ ಸ್ಫೋಟಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...