alex Certify
ಕನ್ನಡ ದುನಿಯಾ       Mobile App
       

Kannada Duniya

ಇವರು ಭಾರತದ ಶ್ರೀಮಂತ ಯುವ ಉದ್ಯಮಿಗಳು

RICH PAYTM38ರ ಹರೆಯದ ವಿಜಯ್ ಶೇಖರ್ ಶರ್ಮಾ ಭಾರತದ 40 ವರ್ಷದೊಳಗಿನ ಅತ್ಯಂತ ಶ್ರೀಮಂತ ಉದ್ಯಮಿ. Hurun India ಮ್ಯಾಗಝೀನ್ ಪ್ರಕಟಿಸಿದ ಪಟ್ಟಿಯಲ್ಲಿ ವಿಜಯ್ ಮೊದಲ ಸ್ಥಾನದಲ್ಲಿದ್ದಾರೆ.

ಒಂದೇ ವರ್ಷದಲ್ಲಿ ಪೇಟಿಎಂ ಸಂಸ್ಥಾಪಕ ವಿಜಯ್ ಅವರ ಆಸ್ತಿ 162 ಪಟ್ಟು ಹೆಚ್ಚಾಗಿದ್ದು, ಇವರು ಈಗ 7300 ಕೋಟಿ ರೂಪಾಯಿಗೆ ಒಡೆಯ. ಮ್ಯಾಗಝೀನ್ ಪ್ರಕಟಿಸಿದ ಶ್ರೀಮಂತರ ಪಟ್ಟಿಯಲ್ಲಿ 339 ಮಂದಿ ಸ್ಥಾನ ಪಡೆದಿದ್ದಾರೆ, ಇವರಲ್ಲಿ 11 ಮಂದಿ ಯುವ ಉದ್ಯಮಿಗಳು, 40ಕ್ಕಿಂತ ಕಡಿಮೆ ವಯಸ್ಸಿನವರು. ಓಲಾ ಸಹ ಸಂಸ್ಥಾಪಕ 30 ರ ಹರೆಯದ ಭವಿಶ್ ಅಗರ್ವಾಲ್ ಅವರ ಬಳಿ 3000 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿ ಇದೆ. 5400 ಕೋಟಿ ಆಸ್ತಿ ಹೊಂದಿರುವ ಫ್ಲಿಪ್ ಕಾರ್ಟ್ ನ ಬಿನ್ನಿ ಬನ್ಸಲ್ ಹಾಗೂ ಸಚಿನ್ ಬನ್ಸಲ್ ಕೂಡ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸ್ನಾಪ್ ಡೀಲ್ ಸಿಇಓ ಕುಣಾಲ್ ಬಹ್ಲ್ 2300 ಕೋಟಿ ರೂ.ಆಸ್ತಿಗೆ ಒಡೆಯ.

ದಿವಿಸ್ ಲ್ಯಾಬೊರೇಟರಿಸ್ ನ ಮೋಟಪರ್ತಿ ಕೂಡ 7100 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಇದೇ ಸಂಸ್ಥೆಯ ಕಿರಣ್ ಸತ್ಚಂದ್ರ ದಿವಿ ಅವರ ಆಸ್ತಿ 6000 ಕೋಟಿ ರೂ. ಮೌಲ್ಯದ್ದು. ಇವರೆಲ್ಲರೂ 40 ವರ್ಷದೊಳಗಿನ ಯುವ ಉದ್ಯಮಿಗಳು ಅನ್ನೋದು ಗಮನಾರ್ಹ ಅಂಶ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...