alex Certify
ಕನ್ನಡ ದುನಿಯಾ       Mobile App
       

Kannada Duniya

ನಾಣ್ಯದಲ್ಲಿಯೇ 40 ಸಾವಿರ ರೂ. ಆಸ್ಪತ್ರೆ ಬಿಲ್ ಕಟ್ಟಿದ್ರು

indian-coin

ಕೋಲ್ಕೊತಾ: 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟ್ ಗಳನ್ನು ಬ್ಯಾನ್ ಮಾಡಿರುವುದು ಹೇಗೆಲ್ಲಾ ಪರಿಣಾಮ ಬೀರಿದೆ ಎಂಬುದನ್ನು ನೋಡಿದ್ದೀರಿ. ಅಂತಹ ಸ್ವಾರಸ್ಯಕರ ಪ್ರಕರಣವೊಂದರ ವರದಿ ಇಲ್ಲಿದೆ ನೋಡಿ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬರನ್ನು ಡಿಸ್ಚಾರ್ಜ್ ಮಾಡಿಸಲು, ಅವರ ಕುಟುಂಬದವರು 40,000 ರೂ ಹಣವನ್ನು ನಾಣ್ಯದಲ್ಲಿಯೇ ಪಾವತಿಸಿದ್ದಾರೆ. ಕೋಲ್ಕೊತಾದ ನ್ಯೂ ಆಲಿಪುರಿಯಲ್ಲಿಯಲ್ಲಿನ ಪೊದ್ದಾರ್ ಆಸ್ಪತ್ರೆಯಲ್ಲಿ ಸುಕಾಂತ್ ಚೌಗಲೆ ಚಿಕಿತ್ಸೆ ಪಡೆದುಕೊಂಡಿದ್ದು, ಗುಣಮುಖರಾಗಿದ್ದಾರೆ. ಅವರನ್ನು ಡಿಸ್ಚಾರ್ಜ್ ಮಾಡಿಸಲು ಕುಟುಂಬದವರು ಹಣ ಪಾವತಿಸಲು ಹೋದಾಗ, ರದ್ದಾದ ನೋಟು ಪಡೆಯಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಾರೆ.

ಇದರಿಂದ ಕಂಗಾಲಾದ ಕುಟುಂಬದವರು ತಮ್ಮ, ಸ್ನೇಹಿತರು ಬಂಧುಗಳಿಗೆ ಮನವಿ ಮಾಡಿದ ಮೇರೆಗೆ, 40,000 ರೂ ನಾಣ್ಯಗಳನ್ನು ಸಂಗ್ರಸಿಸಿ, ಆಸ್ಪತ್ರೆಗೆ ಪಾವತಿಸಿದ್ದಾರೆ. ಮೊದಲಿಗೆ ನಾಣ್ಯಗಳನ್ನು ಪಡೆಯಲು ಒಪ್ಪದ ಸಿಬ್ಬಂದಿ, ಚೆಕ್ ಕೂಡ ತಿರಸ್ಕೃತಗೊಂಡಿದ್ದರಿಂದ ಅನಿವಾರ್ಯವಾಗಿ ನಾಣ್ಯ ಸ್ವೀಕರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...