alex Certify
ಕನ್ನಡ ದುನಿಯಾ       Mobile App
       

Kannada Duniya

ನೌಕರರಿಗೆ ಗುಡ್ ನ್ಯೂಸ್! ಆಯೋಗದ ಶಿಫಾರಸ್ಸಿಗಿಂತಲೂ ಜಾಸ್ತಿ ವೇತನ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗ ಶಿಫಾರಸ್ಸು ಮಾಡಿರುವುದಕ್ಕಿಂತಲೂ ಹೆಚ್ಚು ಕನಿಷ್ಠ ವೇತನ ನೀಡುವ ಸಾಧ್ಯತೆ ಇದೆ.

ಏಪ್ರಿಲ್ 1 ರಿಂದ 7 ನೇ ವೇತನ ಆಯೋಗದ ವರದಿ ಅನುಷ್ಠಾನವಾಗಲಿದ್ದು, ಆಯೋಗದ ಶಿಫಾರಸು ಮೀರಿ ಕನಿಷ್ಠ ವೇತನವನ್ನು 18,000 ರೂ.ನಿಂದ 21,000 ರೂ.ಗೆ ಏರಿಕೆ ಮಾಡುವ ಸಾಧ್ಯತೆ ಇದೆ.

ಕೆಳಗಿನ ಹಂತದ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಕನಿಷ್ಠ ವೇತನವನ್ನು ಪರಿಷ್ಕರಣೆ ಮಾಡಲಾಗ್ತಿದೆ. 7 ನೇ ವೇತನ ಆಯೋಗ ಮಾಡಿರುವ ಶಿಫಾರಸ್ಸು ಮೀರಿ ನೌಕರರಿಗೆ ಕನಿಷ್ಠ ವೇತನ ನಿಗದಿ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಹಿಂದೆ ಸಂಸತ್ ನಲ್ಲಿ ಭರವಸೆ ನೀಡಿದ್ದರು. ಅದರಂತೆ ನೌಕರರಿಗೆ ಶುಭಸಿದ್ದಿ ಸಿಗುವ ನಿರೀಕ್ಷೆ ಇದೆ.

ಸುಮಾರು 47 ಲಕ್ಷ ಕೇಂದ್ರ ಸರ್ಕಾರಿ ನೌಕರರು, 53 ಲಕ್ಷ ಕೇಂದ್ರದ ಪಿಂಚಣಿದಾರರಿಗೆ ಏಪ್ರಿಲ್ 1 ರಿಂದ 7 ನೇ ವೇತನ ಆಯೋಗದ ವರದಿಯ ಅನುಸಾರ ವೇತನ ಹೆಚ್ಚಳವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...