alex Certify
ಕನ್ನಡ ದುನಿಯಾ       Mobile App
       

Kannada Duniya

ಲಾಲು ರ್ಯಾಲಿಗೂ ಮುನ್ನ ಬಾಹುಬಲಿ ಅವತಾರದಲ್ಲಿ ತೇಜಸ್ವಿ ಯಾದವ್

ಬಿಹಾರದಲ್ಲಿ ನಡೆಯುತ್ತಿರುವ ರಾಜಕೀಯ ಹಗ್ಗಜಗ್ಗಾಟದ ನಡುವೆಯೇ ತೇಜಸ್ವಿ ಯಾದವ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಆಗಸ್ಟ್ 27ರಂದು ರಾಜಧಾನಿ ಪಾಟ್ನಾದಲ್ಲಿ ನಡೆಯಲಿರುವ ಆರ್ ಜೆ ಡಿ ರ್ಯಾಲಿಗೆ ಸಂಬಂಧಿಸಿದಂತೆ ಪೋಸ್ಟರ್ ಹಾಕಲಾಗಿದೆ. ಇದ್ರಲ್ಲಿ ಬಾಹುಬಲಿ ಅವತಾರದಲ್ಲಿ ಮಿಂಚುತ್ತಿದ್ದಾರೆ ತೇಜಸ್ವಿ ಯಾದವ್.

ಆರ್ಜೆಡಿ ನಾಯಕ ಧರ್ಮೇಂದ್ರ ಯಾದವ್ ಈ ಪೋಸ್ಟರ್ ಹಾಕಿಸಿದ್ದಾರೆ. ಪೋಸ್ಟರ್ ಪ್ರತಿಯೊಬ್ಬರನ್ನು ಸೆಳೆಯುತ್ತಿದೆ. ಬಾಹುಬಲಿ ಅವತಾರದಲ್ಲಿರುವ ತೇಜಸ್ವಿಯನ್ನು ಜನರು ಬೆರಗುಗಣ್ಣಿನಿಂದ ನೋಡ್ತಿದ್ದಾರೆ. ಬಿಜೆಪಿ ಹಠಾವೋ ದೇಶ್ ಬಚಾವೋ ರ್ಯಾಲಿಯನ್ನು ಆರ್ ಜೆಡಿ ಹಮ್ಮಿಕೊಂಡಿದೆ. ಗಾಂಧಿ ಮೈದಾನದಲ್ಲಿ ನಡೆಯುವ ಈ ರ್ಯಾಲಿಯಲ್ಲಿ ಎನ್ಡಿಎ ಹೊರತುಪಡಿಸಿ ಎಲ್ಲ ಪಕ್ಷಗಳೂ ಪಾಲ್ಗೊಳ್ಳುವ ಸಾಧ್ಯತೆಯಿದೆ.

ಬಿಜೆಪಿ ಜೊತೆ ನಿತೀಶ್ ಕುಮಾರ್ ವಿರುದ್ಧವೂ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ತೇಜಸ್ವಿ ಜೊತೆ ಸಹೋದರ ತೇಜಪ್ರತಾಪ್ ಯಾದವ್ ಗೂ ಪೋಸ್ಟರ್ ನಲ್ಲಿ ಜಾಗ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...