alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳನ್ನ ‘ಆಫೀಸರ್’ ಮಾಡೋಕೆ ಈ ದಾರಿ ಹಿಡಿದಿದ್ದ ತಂದೆ

ಮಗಳ ಕನಸು ನನಸು ಮಾಡೋದಕ್ಕೆ ಅಡ್ಡದಾರಿ ಹಿಡಿದ ತಂದೆಯೊಬ್ಬನನ್ನು ಬಿಹಾರದ ಪಾಟ್ನಾ ಪೊಲೀಸರು ಬಂಧಿಸಿದ್ದಾರೆ. ರಾಮಕಿಶೋರ್ ಸಿಂಗ್ ಅಲಿಯಾಸ್ ಬಾಬಾ ಎಂಬಾತನನ್ನ ಇತ್ತೀಚೆಗೆ ಪೊಲೀಸರು ಕಳ್ಳತನದ ಆರೋಪದ ಮೇಲೆ ಬಂಧಿಸಿದ್ದರು.

ಹಲವು ಡಕಾಯಿತಿ ಪ್ರಕರಣಗಳಲ್ಲಿ ರಾಮ್ ಕಿಶೋರ್ ಸೇರಿದಂತೆ ಆತನ ತಂಡವನ್ನು ಪೊಲೀಸರು ಬಂಧಿಸಿ ಅವರಿಂದ 20 ಲಕ್ಷ ರೂ. ಬೆಲೆ ಬಾಳುವ ಆಭರಣಗಳು ಮತ್ತು ಡಕಾಯಿತಿಗೆ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಮ್ ಕಿಶೋರ್ ವಿಚಾರಣೆಯ ಸಂದರ್ಭದಲ್ಲಿ ಪೊಲೀಸರಿಗೆ ಹೃದಯ ತಟ್ಟುವಂತಾ ವಿಚಾರವೊಂದನ್ನ ಅವನು ಹೇಳಿದ್ದ. ತನ್ನ 12 ವರ್ಷದ ಮಗಳು ಪಾಟ್ನಾದ ಇಂಗ್ಲೀಷ್ ಶಾಲೆಯೊಂದರಲ್ಲಿ ಓದುತ್ತಿದ್ದಾಳೆ. ಅವಳ ಟ್ಯೂಷನ್ ಫೀಸ್ ಸೇರಿದಂತೆ ಶಾಲೆಯ ಖರ್ಚು-ವೆಚ್ಚಗಳಿಗಾಗಿ ಹೆಚ್ಚಿನ ಹಣದ ಅವಶ್ಯಕತೆ ಇದೆ. ಟಿವಿ ಷೋ ಒಂದರಿಂದ ಸ್ಫೂರ್ತಿ ಪಡೆದು ಮಗಳನ್ನು ಓರ್ವ ಅಧಿಕಾರಿಯನ್ನಾಗಿ ಮಾಡಬೇಕು ಅನ್ನೋ ಗುರಿ ಅವನಿಗೆ ಇತ್ತಂತೆ.

ಹಾಗಾಗಿಯೇ ತಾನು ಕಳ್ಳತನ ಮತ್ತು ಡಕಾಯಿತಿಗಳನ್ನ ಮಾಡಬೇಕಾಗಿ ಬಂತು ಅಂತ ರಾಮ್ ಕಿಶೋರ್ ಒಪ್ಪಿಕೊಂಡಿದ್ದಾನೆ. ಡಕಾಯಿತಿ ಮಾಡೋದಕ್ಕೂ ಮೊದಲು ರಾಮ್ ಕಿಶೋರ್ ಸೆಕ್ಯುರಿಟಿ ಗಾರ್ಡ್ ಆಗಿ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ. ಆಗ ಅವನಿಗೆ ತಿಂಗಳಿಗೆ ಆರು ಸಾವಿರ ರೂಪಾಯಿ ಸಂಬಳ ಬರುತ್ತಿತ್ತಂತೆ. ಆ ಕೆಲಸ ಬಿಟ್ಟು ಪಾಟ್ನಾಗೆ ಮರಳಿದ ರಾಮ್ ಕಿಶೋರ್ ಡಕಾಯಿತರ ತಂಡ ಸೇರಿಕೊಂಡಿದ್ದ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...