alex Certify
ಕನ್ನಡ ದುನಿಯಾ       Mobile App
       

Kannada Duniya

ಉತ್ತರ ಪತ್ರಿಕೆ ಸರಿಯಾಗಿ ನೋಡದ ಪರೀಕ್ಷಾ ಮಂಡಳಿ ನೀಡಬೇಕು 5 ಲಕ್ಷ ದಂಡ

ಬಿಹಾರದ ಪರೀಕ್ಷಾ ಮಂಡಳಿಗೆ ಪಾಟ್ನಾ ಹೈಕೋರ್ಟ್ 5 ಲಕ್ಷ ರೂಪಾಯಿ ದಂಡ ವಿಧಿಸಿದೆ. ವಿದ್ಯಾರ್ಥಿನಿಯೊಬ್ಬಳ ಉತ್ತರ ಪತ್ರಿಕೆಯನ್ನು ಸರಿಯಾಗಿ ಪರೀಕ್ಷಿಸದ ಕಾರಣಕ್ಕೆ ದಂಡ ವಿಧಿಸಲಾಗಿದೆ. ವಿದ್ಯಾರ್ಥಿನಿ 2017 ರಲ್ಲಿ 10ನೇ ತರಗತಿ ಪರೀಕ್ಷೆ ಬರೆದಿದ್ದಳು. ಉತ್ತರ ಪತ್ರಿಕೆಯಲ್ಲಿ 2 ಮಾರ್ಕ್ಸ್ ನೀಡಿರಲಿಲ್ಲ. ಮರು ಪರಿಶೀಲನೆ ವೇಳೆ ಎರಡು ಅಂಕ ಹೆಚ್ಚಿಗೆ ಸಿಕ್ಕಿದ್ದಲ್ಲದೆ ಬಿಹಾರ ರಾಜ್ಯಕ್ಕೆ ಆಕೆ ಎರಡನೇ ಸ್ಥಾನ ಪಡೆದಿದ್ದಳು.

ಬೇಗುಸರೈನ ನಿವಾಸಿ ಭವ್ಯಾ ಉತ್ತರ ಪತ್ರಿಕೆಯ ಮರು ಪರಿಶೀಲನೆಗೆ ಹಾಕಿದ್ದಳು. ಆರ್ಟಿಐ ಅಡಿ ಉತ್ತರ ಪತ್ರಿಕೆ ನಕಲನ್ನು ಕೇಳಿದ್ದಳು. ಉತ್ತರ ಪತ್ರಿಕೆ ಮರು ಪರಿಶೀಲನೆ ನಡೆಸಿದ್ದ ಬೋರ್ಡ್ ಒಂದು ಅಂಕವನ್ನು ಮಾತ್ರ ಹೆಚ್ಚಿಗೆ ನೀಡಿತ್ತು. 2018 ರಲ್ಲಿ ಉತ್ತರ ಪತ್ರಿಕೆ ನಕಲು ಕೈ ಸೇರಿದಾಗ ಹಿಂದಿ, ಸಮಾಜ ವಿಜ್ಞಾನದ ಕೆಲ ಉತ್ತರಗಳಿಗೆ ಅಂಕವನ್ನೇ ನೀಡಿರಲಿಲ್ಲ.

ನ್ಯಾಯಕ್ಕಾಗಿ ಭವ್ಯ ಕೋರ್ಟ್ ಮೊರೆ ಹೋಗಿದ್ದಳು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ತಪ್ಪು ಮಾಡಿದ ಬೋರ್ಡ್ ಗೆ ದಂಡ ವಿಧಿಸಿದೆ. 5 ಲಕ್ಷ ರೂಪಾಯಿ ದಂಡ ನೀಡುವಂತೆ ಸೂಚನೆ ನೀಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...