alex Certify
ಕನ್ನಡ ದುನಿಯಾ       Mobile App
       

Kannada Duniya

ಭದ್ರತೆ ಕುರಿತು ನಡೆದ ಸಭೆಯಲ್ಲಿ ಪೊಲೀಸರ ಗಡದ್ದು ನಿದ್ರೆ

ರಾಜ್ಯದ ಕಾನೂನು ಸುವ್ಯವಸ್ಥೆ ಸುಸೂತ್ರವಾಗಿ ನಡೆದುಕೊಂಡು ಹೋಗಲು, ಪೊಲೀಸ್ ಇಲಾಖೆಯ ಪಾತ್ರ ಅಪಾರವಾದದ್ದು. ಆದರೆ ಅದೇ ಪೊಲೀಸ್ ಸಿಬ್ಬಂದಿಗಳು ಸಭೆಯಲ್ಲಿ ನಿದ್ರೆಗೆ ಜಾರಿದರೆ ಏನು ಮಾಡಬೇಕು?

ಈ ರೀತಿಯ ಘಟನೆ ಬಿಹಾರದಲ್ಲಿ ನಡೆದಿದ್ದು, ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಬಿಹಾರದ ಪಾಟ್ನಾದಲ್ಲಿ, ಹಿರಿಯ ಪೊಲೀಸ್ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಕೆಲ ಪೊಲೀಸ್ ಸಿಬ್ಬಂದಿಗಳು ನಿದ್ರೆಗೆ ಜಾರಿದ್ದಾರೆ.

ಪಾಟ್ನಾದಲ್ಲಿ ನಡೆದ ಸಭೆಯಲ್ಲಿ ಪ್ರಮುಖವಾಗಿ ‌ಮಂಗಳವಾರದಿಂದ ಆರಂಭಗೊಳ್ಳಲಿರುವ ದುರ್ಗಾ ಪೂಜೆಗೆ ಅಗತ್ಯ ಕಾನೂನು‌ ವ್ಯವಸ್ಥೆ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲು ಕೆಲ ಸೂಚನೆ ನೀಡಲಾಗುತ್ತಿತ್ತು. ಆದರೆ ಇತ್ತ ಕೆಲ ಅಧಿಕಾರಿಗಳು, ನಮಗೂ ಸಭೆಗೂ‌‌ ಸಂಬಂಧವಿಲ್ಲ ಎನ್ನುವಂತೆ ನಿದ್ರೆಗೆ ಜಾರಿದ್ದರು.

ಇದಕ್ಕೂ ಮೊದಲು ಪಾಟ್ನಾದ ಬೀದಿಬದಿ ವ್ಯಾಪಾರಿ ಬಾಲಕನಿಂದ ತರಕಾರಿಯನ್ನು ಉಚಿತವಾಗಿ ನೀಡುವಂತೆ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪದಲ್ಲಿ ಇಬ್ಬರು ಇನ್ಸ್‌ಪೆಕ್ಟರ್ ಹಾಗೂ 9 ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...