alex Certify
ಕನ್ನಡ ದುನಿಯಾ       Mobile App
       

Kannada Duniya

ಆಂಬುಲೆನ್ಸ್ ತಡೆದ ಬಿ.ಜೆ.ಪಿ. ಮುಖಂಡ, ಪ್ರಾಣಬಿಟ್ಟ ರೋಗಿ

amu-hriyan

ನವದೆಹಲಿ: ತನ್ನ ಕಾರಿಗೆ ತಾಗಿದ ಆಂಬುಲೆನ್ಸ್ ಮುಂದೆ ಹೋಗಲು ಬಿ.ಜೆ.ಪಿ. ಮುಖಂಡ ಅವಕಾಶ ನೀಡದ ಕಾರಣ, ರೋಗಿಯೊಬ್ಬರು ಮೃತಪಟ್ಟ ಹೃದಯವಿದ್ರಾವಕ ಘಟನೆ ಹರಿಯಾಣದ ಫತೇಹಾಬಾದ್ ನಲ್ಲಿ ನಡೆದಿದೆ.

ಬಿ.ಜೆ.ಪಿ. ಕೌನ್ಸಿಲರ್ ದರ್ಶನ್ ನಾಗ್ ಪಾಲ್ ಪ್ರಯಾಣಿಸುತ್ತಿದ್ದ ಕಾರಿಗೆ, ರೋಗಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಆಂಬುಲೆನ್ಸ್ ತಾಗಿದೆ.

ತನ್ನ ಕಾರಿಗೆ ಡ್ಯಾಮೇಜ್ ಆಗಿದೆ ಎಂದು ಆಂಬುಲೆನ್ಸ್ ಚಾಲಕನೊಂದಿಗೆ ಜಗಳ ತೆಗೆದ ದರ್ಶನ್ ರಸ್ತೆ ತಡೆದು ಅರ್ಧ ಗಂಟೆ ಕಾಲ ಆಂಬುಲೆನ್ಸ್ ನಿಲ್ಲಿಸಿದ್ದಾನೆ.

ಆಂಬುಲೆನ್ಸ್ ನಲ್ಲಿದ್ದ ನವೀನ್ ಸೋನಿ(42) ಹೃದಯಘಾತಕ್ಕೊಳಗಾಗಿದ್ದು, ಅವರನ್ನು ಆಸ್ಪತ್ರೆಗೆ ಸಕಾಲಕ್ಕೆ ಸಾಗಿಸಲು ಅಡ್ಡಿಯಾಗಿದೆ.

ತನಗೆ ಪರಿಹಾರ ಕೊಡಬೇಕೆಂದು ದರ್ಶನ್ ನಾಗ್ ಪಾಲ್ ಪ್ರತಿಭಟನೆ ಮಾಡಿದ್ದಾರೆ. ದರ್ಶನ್ ಗೆ ರೋಗಿಯ ಕುಟುಂಬದವರು ಮತ್ತು ಆಂಬುಲೆನ್ಸ್ ಚಾಲಕ ಮನವಿ ಮಾಡಿದರೂ, ಆತನ ಮನಸು ಕರಗಿಲ್ಲ.

ಕೊನೆಗೆ ರಸ್ತೆ ತಡೆಯಿಂದ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿದೆ. ಆಂಬುಲೆನ್ಸ್ ನಲ್ಲಿದ್ದ ರೋಗಿಯ ಸ್ಥಿತಿ ಚಿಂತಾಜನಕವಾಗಿದೆ.

ಬಹುಹೊತ್ತಿನ ಬಳಿಕ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಸಕಾಲಕ್ಕೆ ಚಿಕಿತ್ಸೆ ಸಿಗದೇ ನವೀನ್ ಸೋನಿ ಮೃತಪಟ್ಟಿದ್ದಾರೆ ಎಂದು ಅವರ ಸಹೋದರ ಸೀತಾರಾಂ ಸೋನಿ ಆರೋಪಿಸಿದ್ದಾರೆ.

ಆದರೆ, ದರ್ಶನ್ ನಾಗ್ ಪಾಲ್ ಇದನ್ನು ಅಲ್ಲಗಳೆದಿದ್ದಾರೆ. ನಾನು ಆಂಬುಲೆನ್ಸ್ ಚಾಲಕನೊಂದಿಗೆ ಮಾತನಾಡಿ ಕಳಿಸಿದ್ದೇನೆ ಹೊರತು ಆಂಬುಲೆನ್ಸ್ ತಡೆದು ನಿಲ್ಲಿಸಿರಲಿಲ್ಲ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...