alex Certify
ಕನ್ನಡ ದುನಿಯಾ       Mobile App
       

Kannada Duniya

ಪಠಾಣ್‌ ಕೋಟ್‌ ದಾಳಿ ರೂವಾರಿಗಳನ್ನು ಸುಮ್ಮನೆ ಬಿಡಲ್ಲ ಎಂದ ಪರ್ರಿಕರ್‌

parrikar-army-chief.jpg.image.784.410

ಪಠಾಣ್‌ ಕೋಟ್‌ ವಾಯು ನೆಲೆ ದಾಳಿಯ ಕುರಿತಾಗಿ ನಾವು ಮೃದು ಧೋರಣೆ ತಾಳಿಲ್ಲ, ಬದಲಾಗಿ ಈ ದಾಳಿಯ ಮಾಸ್ಟರ್‌ ಮೈಂಡ್‌ ಗೆ ಖಂಡಿತವಾಗಿಯೂ ನಾವು ಸರಿಯಾದ ಪಾಠವನ್ನು ಕಲಿಸಲಿದ್ದೇವೆ ಎಂದು ರಕ್ಷಣಾ ಸಚಿವ ಮನೋಹರ ಪರ್ರಿಕರ್‌ ಸ್ಪಷ್ಟಪಡಿಸಿದ್ದಾರೆ.

ಇಂಡಿಯಾ ಟಿವಿ ಗಾಗಿ ನಡೆಸಿಕೊಟ್ಟ ‘ಆಪ್‌ ಕೀ ಅದಾಲತ್‌’ ಕಾರ್ಯಕ್ರಮದಲ್ಲಿ ಪಠಾಣ್‌ ಕೋಟ್‌ ದಾಳಿಯ ಕುರಿತು ಮಾತನಾಡಿದ ಪರ್ರಿಕರ್‌, ಭಾರತದ ವಿರುದ್ಧ ಪಾಕ್‌ ನೆಲದಿಂದ ಹೊರಹೊಮ್ಮುವ ಭಯೋತ್ಪಾನೆಯ ಕುರಿತಾಗಿ ನಾವೀಗ ತಾಳ್ಮೆ ಕಳೆದುಕೊಳ್ಳುತ್ತಿದ್ದು ತಕ್ಕ ಉತ್ತರ ನೀಡಲಿದ್ದೇವೆ ಎಂದು ಗುಡುಗಿದ್ದಾರೆ.

ಅಲ್ಲದೇ ಇದೇ ಸಮಯದಲ್ಲಿ ಪಠಾಣ್‌ ಕೋಟ್‌ ದಾಳಿ ಕುರಿತಾಗಿ ಗುಪ್ತಚರ ದಳದ ಮುನ್ನೆಚ್ಚರಿಕೆ ದೊರಕುವ ಮೊದಲೇ ಉಗ್ರರು ವಾಯು ನೆಲೆಯನ್ನು ಪ್ರವೇಶಿಸಿ ಅವಿತುಕೊಂಡಿರಬಹುದು ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ ಸಚಿವರು, ತಾವಿಲ್ಲಿ ಉಗ್ರ ವ್ಯಕ್ತಿ ಮತ್ತು ಉಗ್ರ ಸಂಘಟನೆಯ ಹೆಸರನ್ನು ಮಾತ್ರವೇ ಹೇಳಿದ್ದು, ಯಾವುದೇ ದೇಶದ ಕುರಿತಾಗಿ ಹೇಳಿಲ್ಲ. ಅಲ್ಲದೇ ದೇಶವನ್ನು ಹೆಸರಿಸಿದರೆ ಅದು ಯುದ್ಧವೆಂದೇ ತಿಳಿಯಲ್ಪಡುತ್ತದೆ. ಹಾಗಾಗಿ ನಮ್ಮ ಕಾರ್ಯಾಚರಣೆ ವ್ಯಕ್ತಿಯ ವಿರುದ್ಧವಾಗಿದ್ದು ನಾವು ಆ ದಾಳಿಯ ಮಾಸ್ಟರ್ ಮೈಂಡ್ ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...