alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ಗೆ ಟಾಂಗ್ ಕೊಡೋಕೆ ಬರ್ತಿದೆ ಕಿಂಬೋ…!

ದೇಸೀ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಸದ್ಯ ದೇಶದಲ್ಲಿ ಹೊಸ ಕ್ರಾಂತಿಯನ್ನೇ ಹುಟ್ಟು ಹಾಕಿರುವ ಯೋಗ ಗುರು ಬಾಬಾ ರಾಮ್ದೇವ್ ಈಗ ಮತ್ತೊಂದು ಸಂಚಲನ ಶುರುಮಾಡೋದಕ್ಕೆ ಹೊರಟಿದ್ದಾರೆ.

ವಾಟ್ಸಾಪ್ ಮೆಸೆಂಜಿಂಗ್ ಆಪ್ ಗೆ ಪ್ರತಿಸ್ಪರ್ಧಿಯಾಗಿ ಕಿಂಬೋ ಆಪ್ ಬಿಡುಗಡೆ ಮಾಡೋದಕ್ಕೆ ಇದ್ದಂತಾ ಎಲ್ಲಾ ಅಡೆತಡೆಗಳು ನಿವಾರಣೆಯಾಗಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆಗಸ್ಟ್ 27ರಿಂದ ಕಿಂಬೋ ಮೆಸೇಜಿಂಗ್ ಆಪ್ ನ್ನ ಗ್ರಾಹಕರು ಡೌನ್ಲೋಡ್ ಮಾಡಿಕೊಂಡು ಉಪಯೋಗಿಸಬಹುದಾಗಿದೆ.

ಎಲ್ಲವೂ ಅಂದುಕೊಂಡ ಹಾಗೆ ಆಗಿದ್ದರೆ ಎರಡು ತಿಂಗಳ ಹಿಂದೆಯೇ ಕಿಂಬೋ ಆಪ್ ಬಿಡುಗಡೆಯಾಗಬೇಕಿತ್ತು. ಆದ್ರೆ ಕಾನೂನು ತೊಡಕುಗಳು ಉಂಟಾದ ಹಿನ್ನಲೆಯಲ್ಲಿ ಕಿಂಬೋ ಆಪ್ ಆಗಸ್ಟ್ 27 ರಂದು ಬಿಡುಗಡೆಯಾಗ್ತಿದೆ. ಹರಿದ್ವಾರ್ ಮೂಲದ ಸಂಸ್ಥೆಯೊಂದು ಆಪ್ ನ ಅಭಿವೃದ್ಧಿ ಪಡಿಸಿದೆ. ನೂತನ ಮತ್ತು ಅಡ್ವಾನ್ಸ್ಡ್ ಫೀಚರ್ಸ್ಗಳೊಂದಿಗೆ ಆಗಸ್ಟ್ 27ರಂದು ಕಿಂಬೋ ಆಪ್ ಬಿಡುಗಡೆಯಾಗ್ತಿದೆ.

ಮೇನಲ್ಲಿ ಲಾಂಚ್ ಆಗಿದ್ದ ಪತಂಜಲಿ ಒಡೆತನದ ಆಪ್ ನ್ನು ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಮಂದಿ ಡೌನ್ಲೋಡ್ ಮಾಡಿಕೊಂಡಿದ್ದರು. ಆದ್ರೆ ಕಿಂಬೋ ಆಪ್ ಬಗ್ಗೆ ಫೇಸ್ಬುಕ್ ಮತ್ತು ವಾಟ್ಸಾಪ್ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಗೂಗಲ್ ಮತ್ತು ಆಪಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿರಲಿಲ್ಲ. ಯಾಕಂದ್ರೆ ಕಿಂಬೋದ ಲೋಗೋ ಭಾಗಶಃ ವಾಟ್ಸಾಪ್ ನ್ನೇ ಹೋಲುತ್ತಿತ್ತು. ಆದ್ರೆ ಈಗ ಆ ಎಲ್ಲಾ ತೊಡಕುಗಳು ನಿವಾರಣೆಯಾಗಿದೆ. ಆಗಸ್ಟ್ 27ರಿಂದ ಕಿಂಬೋ ಮತ್ತೆ ಪ್ಲೇ ಸ್ಟೋರ್ ಗಳಲ್ಲಿ ಲಭ್ಯವಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...