alex Certify
ಕನ್ನಡ ದುನಿಯಾ       Mobile App
       

Kannada Duniya

ವಿಳಾಸ ದೃಢೀಕರಣಕ್ಕೆ ಬಳಸುವಂತಿಲ್ಲ ಪಾಸ್ಪೋರ್ಟ್…!

ಇನ್ಮೇಲೆ ವಿಳಾಸ ದೃಢೀಕರಣ ದಾಖಲೆಯಾಗಿ ನೀವು ಪಾಸ್ಪೋರ್ಟ್ ಬಳಸುವಂತಿಲ್ಲ. ಯಾಕಂದ್ರೆ ಪಾಸ್ಪೋರ್ಟ್ ನಲ್ಲಿ ಸದ್ಯ ಇರುವ ಕೊನೆಯ ಪುಟವೇ ಇರುವುದಿಲ್ಲ. ಈ ಪ್ರಸ್ತಾವನೆಗೆ ವಿದೇಶಾಂಗ ಸಚಿವಾಲಯ ಸಮ್ಮತಿ ನೀಡಿದ್ರೆ ಹೊಸ ನಿಯಮ ಜಾರಿಗೆ ಬರಲಿದೆ.

ಈ ಬದಲಾವಣೆ ಸದ್ಯದಲ್ಲೇ ಜಾರಿಗೆ ಬರಲಿದೆ ಅಂತಾ ಹೇಳಲಾಗುತ್ತಿದೆ. ಭಾರತದ ನಾಗರಿಕರಿಗೆ ವಿತರಿಸಲಾಗುವ ನೆಕ್ಸ್ಟ್ ಸಿರೀಸ್ ಪಾಸ್ಪೋರ್ಟ್ ನಲ್ಲಿ ಈ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ.

ಪಾಸ್ಪೋರ್ಟ್ ನ ಕೊನೆಯ ಪುಟವನ್ನು ಖಾಲಿಯಾಗಿಡಲು ನಿರ್ಧಾರ ತೆಗೆದುಕೊಳ್ಳಲಾಗಿದೆಯಂತೆ. ಶೀಘ್ರದಲ್ಲೇ ಈ ಬದಲಾವಣೆ ಮಾಡಲಾಗುವುದು ಅಂತಾ ಪುಣೆಯ ರೀಜನಲ್ ಪಾಸ್ಪೋರ್ಟ್ ಕಚೇರಿಯ ಅಧಿಕಾರಿ ಜೆ.ಡಿ.ವೈಶಂಪಾಯನ್ ತಿಳಿಸಿದ್ದಾರೆ.

ಪಾಸ್ಪೋರ್ಟ್ ನ ಕೊನೆಯ ಪುಟದಲ್ಲಿರುವ ವಿವರಗಳ ಅಗತ್ಯ ಪಾಸ್ಪೋರ್ಟ್ ಕಚೇರಿಗಾಗ್ಲಿ ಅಥವಾ ಇಮಿಗ್ರೇಶನ್ ಇಲಾಖೆಗಾಗ್ಲಿ ಇರುವುದಿಲ್ಲ. ಎಲ್ಲಾ ಪಾಸ್ಪೋರ್ಟ್ ಗಳಲ್ಲೂ ಬಾರ್ ಕೋಡ್ ಗಳಿರುವುದರಿಂದ ಅವುಗಳನ್ನು ಸ್ಕ್ಯಾನ್ ಮಾಡಿದ್ರೆ ವಿವರಗಳು ಲಭ್ಯವಾಗುತ್ತವೆ. ಹಾಗಾಗಿ ಕೊನೆಯ ಪುಟವನ್ನು ಖಾಲಿಯಾಗಿಡಲು ಚಿಂತನೆ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...