alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಹ ಸಂತ್ರಸ್ತರ ಪಾಸ್ಪೋರ್ಟ್ ಆತಂಕಕ್ಕೆ ಸಿಕ್ತು ಪರಿಹಾರ

ನವದೆಹಲಿ: ಕೇರಳದ ಜಲ ಪ್ರವಾಹದಲ್ಲಿ ಹಾನಿಗೊಳಗಾದ ಪಾಸ್ಪೋರ್ಟ್ ಗಳನ್ನು ಸರ್ಕಾರ ಉಚಿತವಾಗಿ ಬದಲಿಸಿಕೊಡಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಘೋಷಿಸಿದ್ದಾರೆ.

ಕೇರಳದಲ್ಲಿ ಕೆಲವು ದಿನಗಳಿಂದ ಉಂಟಾಗಿರುವ ಪ್ರವಾಹದಿಂದ ಹದಿನಾಲ್ಕು ಜಿಲ್ಲೆಯಲ್ಲಿ ಜನ‌ಜೀವನ ಅಸ್ತವ್ಯಸ್ತವಾಗಿದ್ದು, ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಅವರ ದಾಖಲೆ ಪತ್ರಗಳು ನಾಶವಾಗಿವೆ.

ಈ ಮಾಹಿತಿ ಪಡೆದಿರುವ ಸಚಿವೆ ಸುಷ್ಮಾ ಸ್ವರಾಜ್, ಟ್ವೀಟ್ ಮಾಡಿ, ಕೇರಳದಲ್ಲಿ ಪ್ರವಾಹದಿಂದ ಭಾರೀ ಹಾನಿ ಉಂಟಾಗಿದೆ. ಇದರಿಂದ ಹಾನಿಗೊಳಗಾದ ಪಾಸ್ಪೋರ್ಟ್ ಗಳನ್ನು ಬದಲಾಯಿಸಿಕೊಡಲು ನಾವು ನಿರ್ಧರಿಸಿದ್ದೇವೆ. ಸಂಬಂಧಿತ ಪಾಸ್ ಪೋರ್ಟ್ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಟ್ವೀಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...