alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಜಿಟಲ್ ಇಂಡಿಯಾಕ್ಕೆ ಇನ್ನೊಂದು ಕೊಡುಗೆ ಪಾಸ್ಪೋರ್ಟ್ ಸೇವಾ ಆಪ್

ಪಾಸ್ಪೋರ್ಟ್ ತಯಾರಿಸೋದು ಇನ್ಮುಂದೆ ಇನ್ನಷ್ಟು ಸುಲಭವಾಗಲಿದೆ. ಮನೆಯಲ್ಲಿಯೇ ಕುಳಿತು ಮೊಬೈಲ್ ಆ್ಯಪ್ ಮೂಲಕ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸಬಹುದಾಗಿದೆ. ಎಲ್ಲ ಪ್ರಕ್ರಿಯೆ ಪೂರ್ಣವಾದ ಮೇಲೆ ಪಾಸ್ಪೋರ್ಟ್ ನಿಮ್ಮ ಮನೆಗೆ ಬರಲಿದೆ. ನರೇಂದ್ರ ಮೋದಿ ಸರ್ಕಾರದ ಡಿಜಿಟಲ್ ಇಂಡಿಯಾ ಕಾರ್ಯಕ್ರಮದಡಿ ವಿದೇಶಾಂಗ ಸಚಿವಾಲಯ ಮಂಗಳವಾರ ಇದ್ರ ಘೋಷಣೆ ಮಾಡಿದೆ.

ಪಾಸ್ಪೋರ್ಟ್ ತಯಾರಿಸುವ ವೇಳೆ ಬರುವ ಎಲ್ಲ ಸಮಸ್ಯೆಗಳಿಗೆ ಅಂತ್ಯ ಹಾಡುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಪಾಸ್ಪೋರ್ಟ್ ತಯಾರಿಸಲು ಮದುವೆ ಪ್ರಮಾಣ ಪತ್ರದ ಅಗತ್ಯವಿಲ್ಲವೆಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಪಾಸ್ಪೋರ್ಟ್ ತಯಾರಿಸಲು ಇದ್ದ ಹಳೆ ಸಂದಿಗ್ಧ ನಿಯಮಗಳನ್ನು ಬದಲಾಯಿಸಲಾಗಿದೆ. ಜನಸಾಮಾನ್ಯರಿಗೆ ಅನುಕೂಲವಾಗುವಂತಹ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಜನ್ಮ ದಿನಾಂಕದ ಬಗ್ಗೆ ಗೊಂದಲ ಎದುರಾಗ್ತಾಯಿತ್ತು. ಜನ್ಮದಿನ ಖಾತರಿಗೆ ನಾಲ್ಕೈದು ಪ್ರಮಾಣ ಪತ್ರಗಳನ್ನು ಕೇಳಲಾಗ್ತಿತ್ತು. ಇನ್ಮುಂದೆ ಆಧಾರ್ ಕಾರ್ಡ್, ಚಾಲನಾ ಪರವಾನಿಗೆ ಸೇರಿದಂತೆ ಸರ್ಕಾರಿ ಮಾನ್ಯತೆ ಪಡೆದ ಒಂದು ದಾಖಲೆಯನ್ನು ನೀಡಿದ್ರೆ ಸಾಕು ಎಂದು ಸುಷ್ಮಾ ಸ್ಪಷ್ಟಪಡಿಸಿದ್ದಾರೆ.

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಪಾಸ್ಪೋರ್ಟ್ ಸೇವಾ ಆ್ಯಪ್ ಲಭ್ಯವಿದೆ. ಅದನ್ನು ಡೌನ್ಲೋಡ್ ಮಾಡಿ ನೀವು ಅರ್ಜಿ ತುಂಬಿ ಪಾಸ್ಪೋರ್ಟ್ ಪಡೆಯಬಹುದಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...