alex Certify
ಕನ್ನಡ ದುನಿಯಾ       Mobile App
       

Kannada Duniya

ದುಬಾರಿಯಾಗಲಿದೆ ಪಾಸ್ ಪೋರ್ಟ್, ಲೈಸನ್ಸ್

passport

ಇನ್ಮೇಲೆ ನೀವು ಪಾಸ್ ಪೋರ್ಟ್, ಲೈಸನ್ಸ್ ಮಾಡಿಸ್ಬೇಕು ಅಂದ್ರೆ ಸ್ವಲ್ಪ ಜಾಸ್ತಿನೇ ಹಣ ಇಟ್ಕೊಂಡು ಹೋಗಿ. ಯಾಕಂದ್ರೆ ಈ ಎಲ್ಲಾ ಸೇವೆಗಳು ಇನ್ಮೇಲೆ ದುಬಾರಿಯಾಗಲಿವೆ. ಪರೀಕ್ಷಾ ಶುಲ್ಕ ಕೂಡ ಮತ್ತಷ್ಟು ಹೆಚ್ಚಾಗ್ಬೋದು. ಯಾಕಂದ್ರೆ ಈ ಸೇವೆಗಳ ವೆಚ್ಚವನ್ನು ಸರಿದೂಗಿಸುವಂತೆ ಮಾಡುವ ನಿಟ್ಟಿನಲ್ಲಿ ಬೆಲೆ ಏರಿಕೆ ಮಾಡುವಂತೆ ಕೇಂದ್ರ ಸರ್ಕಾರ ಆಯಾ ಇಲಾಖೆ ಮತ್ತು ಸಚಿವಾಲಯಗಳಿಗೆ ಸೂಚಿಸಿದೆ.

ಹಣಕಾಸು ಇಲಾಖೆ ಈಗಾಗ್ಲೇ ಬಜೆಟ್ ಚರ್ಚೆ ಆರಂಭಿಸಿದ್ದು, ಪ್ರತಿ ಇಲಾಖೆ ಮತ್ತು ಸಚಿವಾಲಯಗಳು ಬೆಲೆ ಏರಿಕೆ ಮಾಡಿ ಖರ್ಚನ್ನು ಸರಿದೂಗಿಸಬೇಕೆಂಬ ಲೆಕ್ಕಾಚಾರದಲ್ಲಿದೆ. 2012 ರಲ್ಲಿ ಪಾಸ್ಪೋರ್ಟ್ ಸೇವಾ ವೆಚ್ಚವನ್ನು 1000 ದಿಂದ 1500 ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಬಹುತೇಕ ಸಂದರ್ಭಗಳಲ್ಲಿ ಸೇವಾ ವೆಚ್ಚವೇ ಹೆಚ್ಚಾಗುತ್ತಿರುವುದರಿಂದ ದರ ಏರಿಕೆ ಅನಿವಾರ್ಯ ಅನ್ನೋದು ಇಲಾಖೆಯ ಸಮರ್ಥನೆ. ಈ ನಿಟ್ಟಿನಲ್ಲಿ ವೆಚ್ಚ ನಿರ್ವಹಣಾ ಸಮಿತಿ ಪ್ರತಿ ಇಲಾಖೆ ಮತ್ತು ಸಚಿವಾಲಯದೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...