alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಯಾಣಿಕರನ್ನೇ ಬಿಟ್ಟು ಹೊರಟಿದ್ದ ರೈಲು..!

train 346778ಒಮ್ಮೊಮ್ಮೆ ಯಾವುದಾದರೊಂದು ಕೆಲಸವನ್ನು ವಿಳಂಬವಾಗಿ ಮಾಡಿದಾಗ ಅಂತವರನ್ನು ‘ರೈಲು ಹೋದ ಮೇಲೆ ಟಿಕೆಟ್ ತೆಗೆದುಕೊಂಡಂತೆ’ ಎಂದು ಕಿಚಾಯಿಸಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಟಿಕೆಟ್ ತೆಗೆದುಕೊಂಡು ನಿಗದಿತ ಸಮಯಕ್ಕೆ ನಿಲ್ದಾಣಕ್ಕೆ ಬಂದರೂ ಅಂತಹ ಪ್ರಯಾಣಿಕರನ್ನು ಬಿಟ್ಟು ರೈಲು ಹೊರಟಿದ್ದ ಘಟನೆ ನಡೆದಿದೆ.

ಚೆನ್ನೈ ಸೆಂಟ್ರಲ್ ರೈಲ್ವೇ ನಿಲ್ದಾಣದಿಂದ ಮಂಗಳೂರು ಎಕ್ಸ್ ಪ್ರೆಸ್ (ನಂ. 12685) ನಲ್ಲಿ ಪ್ರಯಾಣಿಸಲು ಹಲವು ಪ್ರಯಾಣಿಕರು ಟಿಕೆಟ್ ರಿಸರ್ವ್ ಮಾಡಿದ್ದು, ಅವರ ಟಿಕೆಟ್ ಕೂಡಾ ಕನ್ಫರ್ಮ್ ಆಗಿತ್ತು. ಸಂಜೆ 5 ಗಂಟೆಗೆ ರೈಲು ನಿಲ್ದಾಣದಿಂದ ಹೊರಡಬೇಕಿದ್ದು, ಮುಂಚಿತವಾಗಿ ಪ್ರಯಾಣಿಕರು ಆಗಮಿಸಿದ್ದರೂ ಅವರುಗಳಿಗೆ ನಿಗದಿಪಡಿಸಲಾಗಿದ್ದ ಬೋಗಿ ಕಾಣಲೇ ಇಲ್ಲ.

ಈ ಪ್ರಯಾಣಿಕರಿಗೆ S 12 ಕೋಚ್ ನಿಗದಿಪಡಿಸಲಾಗಿದ್ದು ಅದನ್ನು ಮಂಗಳೂರು ಎಕ್ಸ್ ಪ್ರೆಸ್ ರೈಲಿಗೆ ಜೋಡಿಸಲು ರೈಲ್ವೇ ಸಿಬ್ಬಂದಿ ಮರೆತು ಬಿಟ್ಟಿದ್ದರು. ಇತ್ತ ತಮ್ಮ ಬೋಗಿ ಹುಡುಕಿ ಸುಸ್ತಾದ ಪ್ರಯಾಣಿಕರು ಸಿಬ್ಬಂದಿ ಬಳಿ ವಿಚಾರಿಸುತಿದ್ದ ವೇಳೆಯೇ ಮಂಗಳೂರು ಎಕ್ಸ್ ಪ್ರೆಸ್ ರೈಲು ನಿಗದಿಪಡಿಸಿದ್ದ ಸಮಯಕ್ಕೆ ತನ್ನ ಸಂಚಾರ ಆರಂಭಿಸಿತು. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು, ರೈಲನ್ನೇರಿ ಚೈನ್ ಎಳೆದು ನಿಲ್ಲಿಸಿದ್ದಾರೆ. ತಾವು ಮಾಡಿದ ಪ್ರಮಾದದ ಅರಿವಾದ ರೈಲ್ವೇ ಅಧಿಕಾರಿಗಳು ಕೊನೆಗೆ 1 ಬೋಗಿಯನ್ನು ಮಂಗಳೂರು ಎಕ್ಸ್ ಪ್ರೆಸ್ ರೈಲಿಗೆ ಜೋಡಿಸಿ ಈ ಪ್ರಯಾಣಿಕರಿಗೆ ಪ್ರಯಾಣ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಈ ಎಲ್ಲಾ ವಿದ್ಯಾಮಾನಗಳಿಂದ 5 ಗಂಟೆಗೆ ಹೊರಡಬೇಕಿದ್ದ ರೈಲು 7 ಗಂಟೆಗೆ ಹೊರಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...