alex Certify
ಕನ್ನಡ ದುನಿಯಾ       Mobile App
       

Kannada Duniya

ಶುಚಿತ್ವದ ಕುರಿತು ಮಹತ್ವದ ನಿರ್ಧಾರ ಕೈಗೊಂಡ ರೈಲ್ವೇ ಇಲಾಖೆ

ದೇಶದ ಅತಿದೊಡ್ಡ ಸಾರಿಗೆ ವ್ಯವಸ್ಥೆಯಾಗಿರುವ ರೈಲ್ವೇ ವ್ಯವಸ್ಥೆಯಲ್ಲಿರುವ ಬಹುದೊಡ್ಡ ಸಮಸ್ಯೆಯೆಂದರೆ ಶುಚಿತ್ವ. ರೈಲಿನಲ್ಲಿರುವ ಶೌಚಾಲಯ ಹಾಗೂ ಬೋಗಿಯಲ್ಲಿ ಅಶುಚಿತ್ವದ ಬಗ್ಗೆ ಸದಾ ದೂರು ಬರುತ್ತಿರುವುರಿಂದ, ಇದಕ್ಕೊಂದು ಪರಿಹಾರವನ್ನು ಕೇಂದ್ರ ರೈಲ್ವೇ ಮಂಡಳಿ ತೆಗೆದುಕೊಂಡಿದೆ.

ಇದರ ಭಾಗವಾಗಿ, ಮುಂದಿನ ದಿನದಲ್ಲಿ ರೈಲುಗಳಲ್ಲಿರುವ ಹೌಸ್ ಕೀಪಿಂಗ್ ಗುತ್ತಿಗೆದಾರರ ಹಣ ಪಾವತಿಯನ್ನು ಪ್ರಯಾಣಿಕರು ನೀಡುವ ರೇಟಿಂಗ್ ಮೇಲೆ ನಿರ್ಧರಿತವಾಗಲಿದೆಯಂತೆ. ಕೇಂದ್ರ ರೈಲು ಇಲಾಖೆಯಲ್ಲಿ ಸದ್ಯ 92 ರೈಲುಗಳಿಗೆ ಈ ಸೇವೆಯನ್ನು ಆರಂಭಿಸಿದ್ದು, ರೈಲಿನಲ್ಲಿರುವ ಸ್ವಚ್ಚತಾ ಸಿಬ್ಬಂದಿಗಳ ಕಾರ್ಯನಿರ್ವಹಣೆ ಬಗ್ಗೆ ಪ್ರಯಾಣಿಕರು ನೀಡುವ ಫೀಡ್ ಬ್ಯಾಕ್ ಆಧಾರದಲ್ಲಿ ಗುತ್ತಿಗೆದಾರರಿಗೆ ಹಣ ನೀಡಲಾಗುವುದು ಎಂದು ತಿಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ರೈಲ್ವೆ ಮಂಡಳಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುನೀಲ್ ಉದಾಸಿ, ಶೇ.40 ರಷ್ಟು ಹಣ ಪಾವತಿ ಪ್ರಯಾಣಿಕರು ನೀಡುವ ಫೀಡ್ ಬ್ಯಾಕ್ ಆಧಾರದಲ್ಲಿಯೇ ನಿರ್ಧಾರವಾಗಲಿದೆ. ಪ್ರಯಾಣಿಕರು ಆರಕ್ಕಿಂತ ಕಡಿಮೆ ಅಂಕ ನೀಡಿದರೆ ಶೇ.40 ರಷ್ಟು ಪಾವತಿ ಕಡಿತವಾಗಲಿದೆ. 6-7.5 ರೊಳಗೆ ಅಂಕ ಪಡೆದರೆ ಶೇ.30 ರಷ್ಟು, 7.6-8.5 ರಷ್ಟು ಅಂಕ ಪಡೆದರೆ ಶೇ.20 ಹಾಗೂ 8.5ಕ್ಕಿಂತ ಹೆಚ್ಚು ಅಂಕ ಪಡೆದರೆ ಯಾವುದೇ ಹಣ ಕಡಿತವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸ್ವಚ್ಛತೆ ಬಗ್ಗೆ ಪ್ರಮುಖವಾಗಿ ಬಯೋ ಶೌಚಾಲಯ, ಕೀಟ ಹಾಗೂ ಸೊಳ್ಳೆ ನಿಯಂತ್ರಣ, ಬೋಗಿಗಳಲ್ಲಿರುವ ಶುಚ್ಚಿತ್ವ ವಿಚಾರದಲ್ಲಿರಲಿದೆ. ಪ್ರಯಾಣಿಕರು ಪ್ರಯಾಣದ ವೇಳೆ ಈ ಎಲ್ಲವನ್ನು ಕೇಳಿ ಪಡೆಯಬಹುದಾಗಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...