alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿವರಿಗೆ ಮಾಡಿದ ಟ್ವಿಟ್ ನಿಂದ ಉಳಿತು ಒದೆ ತಿಂದ ಪ್ರಯಾಣಿಕನ ಪ್ರಾಣ..!

ಛತ್ತೀಸ್ಗಡ ಎಕ್ಸ್ ಪ್ರೆಸ್ ನಲ್ಲಿ ಟೀ ಚೆನ್ನಾಗಿಲ್ಲ ಎಂದಿದ್ದೇ ಪ್ರಯಾಣಿಕರೊಬ್ಬರಿಗೆ ದುಬಾರಿಯಾಗಿ ಪರಿಣಮಿಸಿದೆ. ಟೀ ಚೆನ್ನಾಗಿಲ್ಲವೆಂದ ಪ್ರಯಾಣಿಕನಿಗೆ ಪಾಂಟ್ರಿ ಕಾರ್ ಉದ್ಯೋಗಿಗಳು ಥಳಿಸಿದ್ದಾರೆ. ಪ್ರಯಾಣಿಕನನ್ನು ಕಟ್ಟಿ ಹಾಕಿ ಉದ್ಯೋಗಿಗಳು ಒದೆ ನೀಡಿದ್ದಾರೆ. ಸಹ ಪ್ರಯಾಣಿಕರು ರೈಲ್ವೆ ಸಚಿವರಿಗೆ ಟ್ವಿಟ್ ಮಾಡಿದ್ದರಿಂದ ಪ್ರಯಾಣಿಕ ಬಚಾವ್ ಆಗಿದ್ದಾನೆ.

ಛತ್ತೀಸ್ಗಡ ಎಕ್ಸ್ ಪ್ರೆಸ್ ನಲ್ಲಿ ಸತೀಶ್ ಕುಮಾರ್ ಕುಟುಂಬ ಪ್ರಯಾಣ ಮಾಡುತ್ತಿತ್ತು. ರೈಲಿನಲ್ಲಿ ಟೀ ಖರೀದಿ ಮಾಡಿದ ಸತೀಶ್ ಟೀ ಚೆನ್ನಾಗಿಲ್ಲವೆಂದು ಪಾಂಟ್ರಿ ಕಾರ್ ಮ್ಯಾನೇಜರ್ ಗೆ ಹೇಳಿದ್ದಾನೆ. ಇದ್ರಿಂದ ಕೋಪಗೊಂಡ ಮ್ಯಾನೇಜರ್ ಪಾಂಟ್ರಿ ಕಾರ್ ನಲ್ಲಿ ಸತೀಶ್ ನನ್ನು ಕಟ್ಟಿ ಹಾಕಿ 12 ಸಿಬ್ಬಂದಿ ಜೊತೆ ಸೇರಿ 30 ನಿಮಿಷ ಹೊಡೆದಿದ್ದಾರೆ. ಸತೀಶ್ ಕೂಗದಿರಲೆಂದು ಬಾಯಿಗೆ ಬಟ್ಟೆ ಕಟ್ಟಿದ್ದಾರೆ.

ಸಹ ಪ್ರಯಾಣಿಕರು ಈ ಬಗ್ಗೆ ರೈಲ್ವೆ ಸಚಿವರಿಗೆ ಟ್ವಿಟ್ ಮಾಡಿದ್ದಾರೆ. ಸುದ್ದಿ ರೈಲ್ವೆ ಸಚಿವಾಲಯ ತಲುಪಿದೆ. ತಕ್ಷಣ ಸಿಬ್ಬಂದಿ ಅಲರ್ಟ್ ಆಗಿದ್ದಾರೆ. ಗ್ವಾಲಿಯರ್ ನಲ್ಲಿ 12 ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ. ಮ್ಯಾನೇಜರ್ ತಪ್ಪಿಸಿಕೊಂಡಿದ್ದಾನೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...