alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಸ್ ಪೋರ್ಟ್ ಪಡೆಯೋದಿನ್ನು ನೀರು ಕುಡಿದಷ್ಟೇ ಸುಲಭ

pass port

ನವದೆಹಲಿ: ಆಧುನಿಕ ಜಗತ್ತಿನಲ್ಲಿ ಪ್ರಪಂಚವೇ ಹಳ್ಳಿಯಂತಾಗಿದ್ದು, ಉದ್ಯೋಗ, ಪ್ರವಾಸ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೆ ವಿದೇಶಕ್ಕೆ ಹೋಗಿ ಬರುವುದು ಈಗ ಸಾಮಾನ್ಯ ವಿಷಯ. ವಿದೇಶಕ್ಕೆ ಹೋಗಿ ಬರುವುದು ಸಾಮಾನ್ಯವಾದರೂ ಅದಕ್ಕೆ ಅಗತ್ಯವಾಗಿ ಬೇಕಾದ ಪಾಸ್ ಪೋರ್ಟ್ ಪಡೆಯುವುದು ಸುಲಭವಿರಲಿಲ್ಲ.

ಪಾಸ್ ಪೋರ್ಟ್ ಪಡೆಯಲು ಹಲವಾರು ದಾಖಲೆಗಳನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡಿ ಮಾಡಿಸಬೇಕಿತ್ತು. ಅದಕ್ಕೆಲ್ಲಾ ತಿಂಗಳುಗಟ್ಟಲೆ ಸಮಯ ಹಿಡಿಯುತ್ತಿತ್ತು ಎಂಬುದನ್ನು ಹೇಳಬೇಕಿಲ್ಲ. ಹೀಗೆ ಜನಸಾಮಾನ್ಯರು ಪಾಸ್ ಪೋರ್ಟ್ ಪಡೆಯಲು ಹೆಣಗಾಡುವುದನ್ನು ಮನಗಂಡ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಅವರು, ಇನ್ನುಮುಂದೆ ಪಾಸ್ ಪೋರ್ಟ್ ಪಡೆಯುವ ನಿಯಮಗಳನ್ನು ಸರಳೀಕರಿಸಿದ್ದಾರೆ. ಇದಕ್ಕಾಗಿ ಕೇವಲ ನಾಲ್ಕೇ ನಾಲ್ಕು ದಾಖಲೆಗಳನ್ನು ನೀಡಿದರೆ ಸಾಕು.

4 ಅಧಿಕೃತ ದಾಖಲೆಗಳನ್ನು ಹಾಜರುಪಡಿಸಿದಲ್ಲಿ ಒಂದು ವಾರದಲ್ಲಿ ಪಾಸ್ ಪೋರ್ಟ್ ನಿಮ್ಮ ಕೈ ಸೇರಲಿದೆ. ಪಾಸ್ ಪೋರ್ಟ್ ಅರ್ಜಿಯ ಜೊತೆಗೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾನ್ ಕಾರ್ಡ್ ಹಾಗೂ ಕ್ರಿಮಿನಲ್ ಹಿನ್ನೆಲೆ ಇಲ್ಲದಿರುವ ಕುಟುಂಬದ ಮಾಹಿತಿ ಒಳಗೊಂಡ ಅಫಿಡವಿಟ್ ಸಲ್ಲಿಸಿದರೆ ಸಾಕು ಅಷ್ಟೇ. ಪೊಲೀಸ್ ವೆರಿಫಿಕೇಷನ್ ಇಲ್ಲದೆಯೇ ಪಾಸ್ ಪೋರ್ಟ್ ನಿಮ್ಮ ಕೈ ಸೇರಲಿದೆ. ವಿದೇಶ ಪ್ರಯಾಣದ ಸಂದರ್ಭದಲ್ಲಿ ಪೊಲೀಸ್ ಪರಿಶೀಲನೆ ನಡೆಸಲಾಗುವುದು ಎಂದು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...