alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾದ ಸೃಷ್ಟಿಸಿದೆ ಬಂಗಾಳ ಸರ್ಕಾರ ವಿತರಿಸಿರುವ ಭಾರತದ ಭೂಪಟ

ಪಶ್ಚಿಮ ಬಂಗಾಳದಲ್ಲಿ ನಡೆದ ಶಾಲಾ ಪರೀಕ್ಷೆ ವೇಳೆ ವಿದ್ಯಾರ್ಥಿಗಳಿಗೆ ವಿತರಿಸಿದ ನಕಾಶೆಯಲ್ಲಿ ದೊಡ್ಡ ಪ್ರಮಾದವೇ ನಡೆದಿದೆ. ಜಮ್ಮು ಮತ್ತು ಕಾಶ್ಮೀರ ಪಾಕಿಸ್ತಾನದ ಭಾಗವೆಂದೂ, ಅರುಣಾಚಲ ಪ್ರದೇಶ ಚೀನಾಕ್ಕೆ ಸೇರಿದ್ದೆಂದು ನಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

ಈ ನಕ್ಷೆಯನ್ನು ಟಿಎಂಸಿ ಸದಸ್ಯರೇ ವಿದ್ಯಾರ್ಥಿಗಳಿಗೆ ವಿತರಿಸಿದ್ದರು. ವಿದ್ಯಾರ್ಥಿಗಳಿಗೆ ಇಂತಹ ಭೂಪಟವನ್ನು ವಿತರಿಸಿರುವ ತೃಣಮೂಲ ಕಾಂಗ್ರೆಸ್ ಕೃತ್ಯವನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಪಶ್ಚಿಮ ಬಂಗಾಳ ಮಾಧ್ಯಮಿಕ ಶಿಕ್ಷಣ ಮಂಡಳಿಯ ವಾಟರ್ ಮಾರ್ಕ್ ಕೂಡ ಇವುಗಳ ಮೇಲಿದೆ.

ಹಾಗಾಗಿ ಇದು ಸರ್ಕಾರವೇ ಅಧಿಕೃತವಾಗಿ ವಿತರಿಸಿರುವ ನಕ್ಷೆಯಾಗಿದ್ದು, ಭಾರತದ ಗಡಿ ಆಕ್ರಮಿಸಿಕೊಳ್ಳಲು ಮುಂದಾಗಿರುವ ಪಾಕ್ ಮತ್ತು ಚೀನಾಕ್ಕೆ ಮಮತಾ ಬ್ಯಾನರ್ಜಿ ಬೆಂಬಲವಿದೆಯೇ ಅಂತಾ ಬಿಜೆಪಿ ಪ್ರಶ್ನಿಸಿದೆ. ಟಿಎಂಸಿ ಸರ್ಕಾರ ಭಯೋತ್ಪಾದಕರನ್ನು ಬೆಂಬಲಿಸುತ್ತಿದೆ ಅಂತಾ ಆರೋಪ ಮಾಡಿದೆ.

ದೇಶವನ್ನು ಒಡೆಯಲು ಟಿಎಂಸಿ ಯತ್ನಿಸುತ್ತಿದೆ, ಇದನ್ನು ಖಂಡಿಸಿ ಪ್ರತಿಭಟನೆ ನಡೆಸುವುದಾಗಿ ಬಿಜೆಪಿ ಮುಖಂಡ ರಾಹುಲ್ ಸಿನ್ಹಾ ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪಷ್ಟನೆ ಕೊಡಬೇಕೆಂದು ಒತ್ತಾಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...