alex Certify
ಕನ್ನಡ ದುನಿಯಾ       Mobile App
       

Kannada Duniya

12 ನೇ ತರಗತಿಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದಾನೆ ಅಫ್ಜಲ್ ಗುರು ಪುತ್ರ

ಸಂಸತ್ ದಾಳಿ ಪ್ರಕರಣದ ಅಪರಾಧಿ ಅಫ್ಜಲ್ ಗುರು ಪುತ್ರ ಗಾಲಿಬ್ ಗುರು 12ನೇ ತರಗತಿಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣನಾಗಿದ್ದಾನೆ. 2001ರಲ್ಲಿ ನಡೆದ ಸಂಸತ್ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಫ್ಜಲ್ ಗುರುವನ್ನು 2013ರಲ್ಲಿ ಮರಣ ದಂಡನೆಗೆ ಗುರಿಪಡಿಸಲಾಗಿತ್ತು.

ಇಂದು 12ನೇ ತರಗತಿಯ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಅಪ್ಜಲ್ ಗುರು ಪುತ್ರ ಶೇ.88ರಷ್ಟು ಅಂಕ ಪಡೆದಿದ್ದಾನೆ. ನವೆಂಬರ್ ನಲ್ಲಿ ಪರೀಕ್ಷೆ ನಡೆದಿತ್ತು. 33,893 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಕೂಡ ಬಾಲಕಿಯರೇ ಮಂದಿದ್ದಾರೆ.

ಕೇವಲ ಶೇ.58ರಷ್ಟು ಬಾಲಕರು ಉತ್ತೀರ್ಣರಾಗಿದ್ದು, ಶೇ.64ರಷ್ಟು ವಿದ್ಯಾರ್ಥಿನಿಯರು ಮುಂದಿನ ತರಗತಿಗೆ ಅರ್ಹತೆ ಪಡೆದಿದ್ದಾರೆ. ಅಪ್ಜಲ್ ಗುರು ಪುತ್ರ ಗಾಲಿಬ್ 10ನೇ ತರಗತಿಯಲ್ಲೂ ಶೇ.95ರಷ್ಟು ಅಂಕ ಪಡೆದಿದ್ದ. ಸಾಮಾಜಿಕ ತಾಣಗಳಲ್ಲಿ ಆತನಿಗೆ ಅಭಿನಂದನೆ ಹರಿದು ಬಂದಿದೆ.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...