alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾದಾತ್ಮಕ ಟ್ವಿಟ್ ಮಾಡಿ ನಂತ್ರ ಡಿಲಿಟ್ ಮಾಡಿದ ಪರೇಶ್ ರಾವಲ್

ಗುಜರಾತ್ ಚುನಾವಣೆ ಹತ್ತಿರ ಬರ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್, ಬಿಜೆಪಿ ಯುದ್ಧ ಶುರುವಾಗಿದೆ. ಮಂಗಳವಾರ ಯುವ ಕಾಂಗ್ರೆಸ್ ಮ್ಯಾಗಜೀನ್ ಯುವ ದೇಶ್ ಟ್ವೀಟರ್ ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಗ್ಗೆ ವಿವಾದಾತ್ಮಕ ಟ್ವಿಟ್ ಮಾಡಲಾಗಿತ್ತು.

ಪ್ರಧಾನ ಮಂತ್ರಿ ಮೋದಿ, ಅಮೆರಿಕಾ ಅಧ್ಯಕ್ಷ ಹಾಗೂ ಬ್ರಿಟನ್ ಪ್ರಧಾನಿ ಜೊತೆಗಿರುವ ವ್ಯಂಗ್ಯ ಚಿತ್ರ ಹಾಕಲಾಗಿತ್ತು. ಅದ್ರಲ್ಲಿ ಮೋದಿ ಟೀ ಮಾರಾಟ ಮಾಡುತ್ತಿರುವಂತೆ ತೋರಿಸಿ ಮೋದಿಯವರನ್ನು ಅವಮಾನ ಮಾಡುವ ಈ ಚಿತ್ರಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಈ ಟ್ವಿಟ್ ಗೆ ಮುನಿಸಿಕೊಂಡ ಬಿಜೆಪಿ ಸಂಸದ ಹಾಗೂ ನಟ ಪರೇಶ್ ರಾವಲ್ ಮತ್ತೊಂದು ವಿವಾದಾತ್ಮಕ ಟ್ವಿಟ್ ಮಾಡಿದ್ದಾರೆ.

ಪರೇಶ್ ರಾವಲ್ ಕಾಂಗ್ರೆಸ್ ಟ್ವೀಟರ್ ಗೆ ವಿರುದ್ಧವಾಗಿ ಈ ಟ್ವಿಟ್ ಮಾಡಿದ್ದಾರೆ. ನಮ್ಮ ಚಾಯ್ ವಾಲಾ ನಿಮ್ಮ ಬಾರ್ ವಾಲಾಗಿಂತ ಬೆಸ್ಟ್ ಎಂದು ಟ್ವಿಟ್ ಮಾಡಿದ್ದರು. ಪರೇಶ್ ರಾವಲ್ ಟ್ವಿಟ್ ನೋಡ್ತಿದ್ದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ತಡರಾತ್ರಿ ಮಾಡಿದ್ದ ಈ ಟ್ವಿಟನ್ನು ಕೆಲವೇ ನಿಮಿಷಗಳಲ್ಲಿ ಡಿಲಿಟ್ ಮಾಡಿದ ಪರೇಶ್ ರಾವಲ್,ಇನ್ನೊಂದು ಟ್ವಿಟ್ ಮೂಲಕ ಕ್ಷಮೆ ಕೇಳಿದ್ದಾರೆ.

ಕ್ಷಮಿಸಿ, ಬೇರೆಯವರ ಭಾವನೆಗಳಿಗೆ ಧಕ್ಕೆ ತರುವಂತ ಟ್ವಿಟ್ ಮಾಡಿದ್ದೆ ಎಂದು ರಾವಲ್ ಹೇಳಿದ್ದಾರೆ. ಇತ್ತ ಯುವ ಕಾಂಗ್ರೆಸ್ ಮೋದಿ ಬಗ್ಗೆ ಮಾಡಿದ್ದ ಟ್ವಿಟನ್ನೂ ಡಿಲಿಟ್ ಮಾಡಿದೆ. ಕಾಂಗ್ರೆಸ್ ಇದಕ್ಕೆ ಕ್ಷಮೆ ಕೋರಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...