alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಷುಲ್ಲಕ ಕಾರಣಕ್ಕೆ ಮಗುವಿನ ಮೇಲೆ ಕಾದ ಕಬ್ಬಿಣದ ರಾಡ್ ಇಟ್ಟು ಚಿತ್ರಹಿಂಸೆ

ಬರ್ಹಾಂಪುರ್ ನಲ್ಲಿ ಮನಕಲಕುವ ಘಟನೆ ನಡೆದಿದೆ. ಊಟ ಮಾಡಲ್ಲ ಎನ್ನುವ ಕಾರಣಕ್ಕೆ ಸ್ನೇಹಿತೆಯ ಮಗುವಿಗೆ ಚಿತ್ರಹಿಂಸೆ ನೀಡಿದ ಘಟನೆ ಬೆಳಕಿಗೆ ಬಂದಿದೆ. ಕಾದ ಕಬ್ಬಿಣದ ರಾಡನ್ನು ಮಗುವಿನ ಮೇಲಿಟ್ಟು ಚಿತ್ರಹಿಂಸೆ ನೀಡಿದ್ದಾಳೆ.

ಮಗುವನ್ನು ಎಂಕೆಸಿಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಘಟನೆ ಎರಡು ದಿನಗಳ ಹಿಂದೆ ನಡೆದಿದೆ. ಸ್ಥಳೀಯರ ಮಾಹಿತಿ ಮೇರೆಗೆ ನಿನ್ನೆ ಪ್ರಕರಣ ಬೆಳಕಿಗೆ ಬಂದಿದೆ. ಮಗುವಿನ ತಾಯಿ ಹಾಗೂ ತಂದೆ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ.

ಶಾಲೆಗೆ ರಜೆಯಿರುವ ಕಾರಣ ನಾಲ್ಕು ವರ್ಷದ ಮಗಳನ್ನು ಪಾಲಕರು ಸ್ನೇಹಿತರ ಮನೆಯಲ್ಲಿ ಬಿಟ್ಟು ಹೋಗಿದ್ದರು. ಮಕ್ಕಳ ಜೊತೆ ಮಗಳು ಆಟವಾಡ್ಲಿ ಎನ್ನುವ ಉದ್ದೇಶ ಅವರದ್ದಾಗಿತ್ತು. ಆದ್ರೆ ಸ್ನೇಹಿತೆ ಅವ್ರ ನಂಬಿಕೆಗೆ ಮೋಸ ಮಾಡಿದ್ದಾಳೆ. ನಾಲ್ಕು ವರ್ಷದ ಮಗು ಏನೂ ತಿನ್ನಲಿಲ್ಲ ಎನ್ನುವ ಕಾರಣಕ್ಕೆ ಬಿಸಿ ಕಬ್ಬಿಣದ ರಾಡನ್ನು ಮಗುವಿನ ಮೇಲಿಟ್ಟಿದ್ದಾಳೆ. ಸ್ನೇಹಿತೆ ಏಕೆ ಹೀಗೆ ಮಾಡಿದ್ಲು ಎಂಬುದು ಗೊತ್ತಾಗ್ತಿಲ್ಲವೆಂದು ಪಾಲಕರು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...